Thursday, November 18, 2010
ಗುರು ಶಿಷ್ಯರ ಸಾಮೂಹಿಕ ನಾಟಕ ಪ್ರಧರ್ಶನ
ದಿನಾಂಕ ೧೬ ನವೆಂಬರ್ ೨೦೧೦ ರ ಸೋಮವಾರ ಎಂದಿನಂತೆ ಗ್ರಂಥಾಲಯದಲ್ಲಿ ಹಿಂದಿನ ದಿನದ ನಾಲ್ಕೈದು ಪತ್ರಿಕೆಗಳು ಕಾಣಲಿಲ್ಲವಾದ್ದರಿಂದ ಅಂದು ಅಲ್ಲಿದ್ದ ಗ್ರಂಥಪಾಲಕಸಹಾಯಕಿಯವರು ಮತ್ತು ಸೋಮವಾರವಾದ ಕಾರಣ ಗ್ರೂಪ್ ಡಿ ನೌಕರರೂ ಹಾಜರಿದ್ದರು ಕಾಣದಿದ್ದ ಪತ್ರಿಕೆಗಳ ಬಗ್ಗೆ ವಿಚಾರಿಸಿದ್ದಕ್ಕೆ ಹಾಜರಾತಿ ಪುಸ್ತಕ ತೋರಿಸಿ ನೋಡೋಣ ಎಂದಿದ್ದಕ್ಕೆ ,ಪಕ್ಕದ ಕಟ್ಟಡದ ಒಬ್ಬ ಪರಿಚಯಸ್ತರು ತೆಗೆದುಕೊಂಡಿದ್ದಾರೆ ಮತ್ತು ಅವರ ರೂಮಿನ ಬಾಗಿಲು ಇನ್ನೂ ತೆಗೆಯದ ಕಾರಣ ಪತ್ರಿಕೆಗಳನ್ನು ಅವರು ಬಂದ ಮೇಲೆ ವಾಪಸ್ಸು ಪಡೆದು ಓದಲು ನೀಡುತ್ತೇವೆಂದು ತಿಳಿಸಿದರು ಸ್ವಲ್ಪ ಬೇಜಾರಾದ ನಾವು ಅವರಿವರಿಗೆಕೆ ಲೈಬ್ರರಿಯ ಪತ್ರಿಕೆಗಳನ್ನು ನೀಡುತ್ತೀರಿ ಅಥವಾ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದೀರಿ ನಿಮ್ಮಗಳ ತಪ್ಪಿನಿಂದ ನಮ್ಮ ಸಮಯ ಹಾಳಾಗುವುದರ ಜೊತೆಗೆ ಇನ್ನೂ ಸರಿಯಾಗಿ ಕೆಲಸ ನಿರ್ವಹಣೆ ಕಲಿತಿಲ್ಲವೆಂದು ಎಚ್ಚರಿಕೆ ನೀಡಿ ಹೊರ ಹೋದೆವು ಈ ಘಟನೆಯಿಂದ ಕುಪಿತಗೊಂದಿದ್ದ ಸಿಬ್ಬಂದಿಯು ಎಚ್ಚರಿಕೆ ನೀಡಿದ ವ್ಯಕ್ತಿಗೆ ಏನಾದರೂ ನಾವು ತಿರುಗೇಟು ನೀಡಲೇಬೇಕೆಂದು ಪಣತೊಟ್ಟ೦ತಿತ್ತು ಅದಕ್ಕೆಂದೇ ದಿನಾ೦ಕ ೧೭ ನವೆಂಬರ್ ೨೦೧೦ ರಂದು ಬಕ್ರೀದ್ ಹಬ್ಬದ ರಜೆಯಿದ್ದದ್ದರಿಂದ ಈ ದಿನದ ಪತ್ರಿಕೆಗಳನ್ನು ದಿನಾಂಕ ೧೮ ರ೦ದು ಎಂದಿನಂತೆ ಓದುತ್ತಿದ್ದಾಗ ಕಾಣಸಿಗಲಿಲ್ಲದ ದಿನಾಂಕ ೧೭ ರ ಬೇರೆ ಪತ್ರಿಕೆಗಳ ಬಗ್ಗೆ ಕೇಳಿದೆವು, ಆ ಮಹಿಳಾ ಸಿಬ್ಬಂದಿಯು ಆಬ್ಸೆಂಟ್ ಹಾಕಿದ್ದೀವಿ ಹೋಗ್ರಿ ಎಂದರು ಮೊದಲೇ ಸಾರ್ವಜನಿಕರ ನ೦ಬಿಕೆ ಕಳಕೊಂಡಿರುವ ಇವರನ್ನು ಸಂಪೂರ್ಣ ನ೦ಬಲಾಗದೆ೦ದು ಹಾಜರಾತಿ ಪುಸ್ತಕ ತೋರಿಸಲು ಕೇಳಿದೆವು,ಆ ಮಹಿಳಾ ಸಿಬ್ಬಂದಿಯು, ತೋರಿಸಲೋ ಬೇಡವೋ ಎಂಬಂತೆ ಶನ್ನೆಯ ಮೂಲಕ ಗ್ರೂಪ್ ಡಿ ನೌಕರನ ಆಜ್ಞೆ ಕೇಳಿದರು. ಸಾರ್ವಜನಿಕರಿಗೆ ಹಾಜರಾತಿ ಪುಸ್ತಕ ತೋರಿಸುವ ಕಾನೂನು ಇಲ್ಲ ಹಾಗೂ ತೋರಿಸಬಾರದೆಂದು ನಮ್ಮ ಮಂಡ್ಯ ಸಾಹೇಬರು ಹೇಳಿದ್ದಾರೆ ಎಂದು ಇಬ್ಬರೂ ಕ್ಯಾತೆ ತೆಗೆದು ಜಗಳ ತೆಗೆದರು, ನಾವು ತೋರಿಸಲೇ ಬೇಕು ಎಂದು ಪಟ್ಟು ಹಿಡಿದು ಬಂದಿರದ ಪತ್ರಿಕೆಗಳಿಗೆ ಆಬ್ಸೆಂಟ್ ಮಾಡಿಸಿದೆವು ಮೊದಲೇ ನನ್ನ ಮೇಲೆ ಹೆಚ್ಚು ಕುಪಿತಗೊಂಡಿದ್ದ ಗ್ರೂಪ್ ಡಿ ಸಿಬ್ಬಂದಿಯು ಮತ್ತದೇ ತಮ್ಮ ವರಸೆ ತೆಗೆದು ನಾವು ಹಿಂದಿನ ದಿನದ (೧೭ರ)ಪತ್ರಿಕೆಗಳನ್ನು ಓದುತ್ತಿದ್ದ ಸಮಯದಲ್ಲಿ ನಮ್ಮ ಕಣ್ಣಿಗೆ ಸಿಗದ ಹಾಗೆ ಬೇರೆಡೆ ಬಚ್ಚಿಟ್ಟಿದ್ದ, ದಿನಾಂಕ ೧೭ ರ ಕನ್ನಡ ಪ್ರಭ ಪತ್ರಿಕೆಯನ್ನು ' ಆಗಲೇ ಓದಿ ಮುಗಿಸಿ ಇಟ್ಟಿದ್ದ ಪತ್ರಿಕೆಗಳೊಂದಿಗೆ ಯಾರಿಗೂ ಗೊತ್ತಾಗದ ಹಾಗೆ ಉಪಾಯದಿಂದ ಸೇರಿಸಿಬಿಟ್ಟಿದ್ದರು ಎಂಬುದು ಇವರ ಮಾಮೂಲಿ ಚಮತ್ಕಾರಗಳಲೊಂದು.ಹಾಗೂ ತಮಗೆ ಪತ್ರಿಕೆಗಳನ್ನೋದಗಿಸುವ ಪಕ್ಕದ ಕಚೇರಿಯಲ್ಲಿನ ಪತ್ರಿಕಾ ಸರಬರಾಜುಧಾರರೊಬ್ಬರನ್ನು ಕರೆತಂದು ತಾವೇ ಉಪಾಯದಿಂದ ಸೇರಿಸಿದ್ದ ಕನ್ನಡ ಪ್ರಭ ಪತ್ರಿಕೆಯನ್ನು ತೋರಿಸುತ್ತಾ 'ನೋಡಿ ದಿನಾಂಕ ೧೭ ರ ಕನ್ನಡ ಪ್ರಭ ಪತ್ರಿಕೆ ಬಂದಿದೆ ಆದರೂ ಆಬ್ಸೆಂಟ್ ಬೀಳಿಸಿದರು ಎಂದು ಮುಂಚೆಯೇ ಬರೆದುಕೊಂಡಿದ್ದ ಕಥೆಗೆ ನಾಟಕ ಪ್ರದರ್ಶಿಸಿ ಓದುಗರಿಂದ ತಮ್ಮ ಮೇಲೆ ಕನಿಕರ ಬರಿಸಲು ಯಶಸ್ವಿಯೂ ಆದರು ಮತ್ತು "ಟೇಬಲ್ ಕುಟ್ಟಿ ನಮ್ಮನ್ನು ಪ್ರತಿದಿನವೂ ಏನೇನೋ ಪ್ರಶ್ನಿಸುತ್ತಾರೆ "ನೀವೇ ಸಹಾಯ ನೀಡಿ ಎಂದು ನ್ಯಾಯ ಕೂಡ ಒಪ್ಪಿಸಿದರು, ಆ ಏಜೆ೦ಟರು, ಏಕವಚನದಲ್ಲಿ ಮಾತನಾಡಿಸುತ್ತಾರೆ 'ಟೇಬಲ್ ಕುಟ್ಟಿ ನಮ್ಮನ್ನು ಪ್ರಶ್ನಿಸುತ್ತಾರೆ ನಮ್ಮ ಮರ್ಯಾದೆಗೆ ತೊಂದರೆಯಾಗುತ್ತಿದೆ ಎಂದು ಪೊಲೀಸರಿಗೆ ತಿಳಿಸಿ' ಅವರೇ ಬಂದು ಒದ್ದು ಎಳೆದುಕೊಂಡು ಹೋಗುತ್ತಾರೆ ಎಂದು ಸಲಹೆ ನೀಡಿದಕ್ಕೆ ವಿರೋಧ ವ್ಯಕ್ತಪಡಿಸಿದ ನಾವು, ತಕ್ಷಣ ಅಲ್ಲಿ ನೆರೆದಿದ್ದ ಬೇರೆ/ ಇತರೆ ಓದುಗರಿಗೆ ಈ ಸುಳ್ಳಿನ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ಕೇಳಿ, ಸುಳ್ಳು ನ೦ಬಿಸುತ್ತಿದ್ದ ಗ್ರೂಪ್ ಡಿ ಸಿಬ್ಬಂದಿಯ ವಂಚನೆಯನ್ನು ನಿಲ್ಲಿಸಿದ್ದನ್ನರಿತ ಆ ಪತ್ರಿಕಾ ಸರಬರಾಜುಧಾರರು ತಾನೇ ಸಮಸ್ಯೆ ತಂದುಕೊಂಡು ಬಿಟ್ಟೇನೆ೦ದು ಹೆದರಿ ಅಲ್ಲಿಂದ ಜಾಗ ಖಾಲಿ ಮಾಡಿದರು . ಇದರಿಂದ ಉಪಯೋಗವಾದಂತೆ ಕಾಣದ ಆ ಸಿಬ್ಬಂದಿಗಳು ತಾವೇ ಸಾರ್ವಜನಿಕ ಓದುಗರ ಸೋಗಿನಲ್ಲಿ ಕರೆತಂದಿದ್ದ ತಮ್ಮ ತಮ್ಮ ಕಡೆಯ ವ್ಯಕ್ತಿಗಳ ಮುಖಾಂತರ ತಮ್ಮನ್ನು ಪ್ರಶ್ನಿಸುತ್ತಿದ್ದ ವ್ಯಕ್ತಿಗೆ ಬುದ್ದಿ ಹೇಳಿಸಲು ವಿಫಲರಾದರೂ ಕೂಡ. ಇದೆ ರೀತಿ ಗ್ರಂಥಾಲಯದವರ/ದ ಯಾವುದೇ ತಪ್ಪನ್ನು ಕಂಡು ಹಿಡಿದು ನಮಗೆ ಕಿರಿ ಕಿರಿ ಮಾಡಿದರೆ ನಾವೇ ನಿಮ್ಮ ಮೇಲೆ ಪೊಲೀಸರಿಗೆ ದೂರು ನೀಡುತ್ತೇವೆ ಉಷಾರ್ ಎಂದು ಎಚ್ಚರಿಕೆಯನ್ನೂ ನೀಡಿದರು. ಇದು ಗ್ರಂಥಾಲಯದಲ್ಲಿನ ನಿತ್ಯ ಸತ್ಯ .
Saturday, October 30, 2010
ಸ್ವಯಂ ಪ್ರೇರಕ ನಾಗರೀಕರಿಂದ ಗ್ರಂಥಾಲಯ ಸಿಬ್ಬಂದಿಗೆ ಉತ್ತಮ ನಿರ್ವಹಣೆ ತರಭೇತಿ, ಡೊಂಕಿನ.......ಬಾಲಕ್ಕೆ ದಬ್ಬೆ ಕಟ್ಟಿದಂಗೆ!
ಕೆ.ಆರ್.ಪೇಟೆಯ ಗ್ರಂಥಾಲಯ ಸಿಬ್ಬಂದಿಗೆ ಕೆಲ ಪ್ರಜ್ಞಾವಂತ ಓದುಗ ಸಾರ್ವಜನಿಕರು ಕಳೆದ ಕೆಲತಿಂಗಳು ಗಳಿಂದ ಉತ್ತಮ ಮತ್ತು ಜವಾಬ್ದಾರಿಯುತ ಆಡಳಿತ ಮತ್ತು ಸಾರ್ವಜನಿಕ ಸ್ನೇಹಿ ಗ್ರಂಥಾಲಯವನ್ನಾಗಿಸಲು ಸ್ವಯಂ ಪ್ರೇರಣೆಯಿಂದ ತರಭೇತಿ ನೀಡುತ್ತಾ ಬರುತ್ತಿದ್ದರೂ ತಮ್ಮ ಹಳೆ ವರಸೆಯನ್ನೇ ಆಗಾಗ ಪ್ರಧರ್ಶಿಸುತ್ತಾ ಬರುತ್ತಿದ್ದಾರೆ ಇಲ್ಲಿನ ಸಿಬ್ಬಂದಿಗಳು .ಈ ದಿನ ಅಂದರೆ ದಿನಾಂಕ ೩೦ ಅಕ್ಟೋಬರ್ ೨೦೧೦ ರಂದು ಒಂದು ಕಿರು ಪರೀಕ್ಷೆ ನಡೆಸಿದರು ಅದೇನೆಂದರೆ ಕೆಲದಿನಗಳಿಂದೀಚೆಗೆ ಗ್ರಂಥಾಲಯಕ್ಕೆ ಹಾಕಿಸಿಕೊಳ್ಳುತ್ತಿರುವ ಟೈಮ್ಸ್ ಆಫ್ ಇಂಡಿಯಾ"(ಬಿಡಿ ಪತ್ರಿಕೆ ಬೆಲೆ -ರೂ.೩ .೫೦) ಪತ್ರಿಕೆಯ ಬದಲು ಬೇರೊಂದು ಪತ್ರಿಕೆ ಕಾಣಸಿಗುತ್ತಿತ್ತು ದಿನಾಂಕ ೨೭ ಅಕ್ಟೋಬರ್ ೨೦೧೦ ರಂದು ಗ೦ಬೀರವಾಗಿ ಗಮನಿಸಿದ ಮುಖ್ಯ ಸ್ವಯಂ ತರಭೆತುಧಾರ ನಾಗರೀಕರೊಬ್ಬರು ಈ ವಿಷಯದ ಬಗ್ಗೆ ತಿಳಿಸಲು ಕೋರಿದರು ಅದಕ್ಕವರು ಯಾವುದೋ ನೆಪ ಹೇಳಿದರು, ಟೈ. ಆ .ಇ . ಬಂಡಲ್ ಮಿಸ್ಸಾದ್ರೆ "ಡೆಕ್ಕನ್ ಕ್ರೋನಿಕಲ್ "(ಬಿಡಿ ಪತ್ರಿಕೆ ಬೆಲೆ -ರೂ.೨.೫೦) ಹಾಕ್ತಾರೆ ಅಡ್ಜೆಸ್ಟ್ ಮಾಡ್ಕೊಬೇಕು ಎಂದರು ,ಒಂದಿನ ಎರಡು ದಿನ ಆದ್ರೆ ಪರವಾಗಿಲ್ಲಾ ಅದನ್ನೇ ರೂಡಿ ಮಾಡ್ಕೊತಿದ್ದೀರಲ್ಲಾ? ಹಾಗಾದರೆ ಟೈ. ಆ .ಇ . ಬಂಡಲ್ ಕೆಲ ದಿನಗಳಿಂದ ಕೆ .ಆರ್ .ಪೇಟೆಗೆ ಬರುತ್ತಿಲ್ವಾ ? ಎಂದು ಪುನಃ ಕೇಳಿದ್ದಕ್ಕೆ, ಅದಕ್ಕೆ ಅಲ್ವೇ "ಡೆ ಕ್ರೋ " ಬರುತ್ತಿರೋದು ಎಂದು ತಿಳಿಸಿ ತಮ್ಮ ಸ್ನೇಹಿತರೊಟ್ಟಿಗೆ ಮಾತನಾಡಲು ಹೋದರು. ಹೋ ಹೋ ಹೌದೇನು ಮುಖ್ಯ ಪತ್ರಿಕೆಗಳು ಮಿಸ್ಸಾಗದಂತೆ ಗಮನ ಕೊಡುವುದು ನಿಮ್ಮ ಜವಾಬ್ದಾರಿ ಕೂಡ ಎಂದು ತಿಳಿ ಹೇಳಿದೆವು .ಆಯ್ತು ಎಲ್ಲಿ ಪತ್ರಿಕೆ ರಿಜಿಸ್ಟರ್ ಬುಕ್ ತೋರಿಸಿ ಎಂದು ಕೇಳಿದಾಗ ಮೊದಲು ಹಿಂಜರಿದರಾದರೂ ಒಲ್ಲದ ಮನಸ್ಸಿನಿಂದ ತಮ್ಮ ಸಹಾಯಕಿಯ ಮುಖಾಂತರ ತೋರಿಸಿದರು ಅಲ್ಲಿ ಆ ಹೊಸ ಪತ್ರಿಕೆಯ ಹೆಸರು ನಮೂದಿಸಿರಲಿಲ್ಲ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಜಾಗದಲ್ಲಿ ಪ್ರೆಸೆಂಟೂ ಇಲ್ಲಾ ಅಬ್ಸೆಂಟೂ.. ಇಲ್ಲಾ ಬರಿ ಒಂದು ಒಂದಂಕಿಯಾಕಾರದ ಗೀರು ಮಾತ್ರ ಇದೆ ,ಏಕೆ ಹೀಗಿದೆ?ಏಕೆ ಹೀಗೆ ಮಾಡುತಿದ್ದೀರಿ ? ಎಂದು ಪ್ರಶ್ನಿಸಿದ್ದಕ್ಕೆ ತಕ್ಷಣ ಆ ಹಾಜರಿ ಪುಸ್ತಕದಲ್ಲಿ ಅವಸರದಿಂದ ಪ್ರೆಸೆಂಟ್ (ಆಂಗ್ಲ ವರ್ಣ 'ಪಿ'ಆಕಾರದಲ್ಲಿ ಬರೆದಿರುತ್ತಾರೆ ) ಜಾಗದಲ್ಲಿ ಅಬ್ಸೆಂಟ್ (ಆಂಗ್ಲ ವರ್ಣ 'ಎ ' ಆಕಾರದಲ್ಲಿ ಬರೆದಿರುತ್ತಾರೆ ) ಮಾಡಿದರು, ಹೀಗೆ ನೀಡಿದ್ದ ಅಬ್ಸೆಂಟ್ ಹಾಲಿ ಬಂದಿದ್ದ ಪತ್ರಿಕೆಗೆ ಬಿದ್ದಿತು ಹಾಗು ಗಾಬರಿಯಿಂದ ತಪ್ಪು ಮಾಡಿದ್ದನ್ನು ಅರಿತಂತೆ ನಾಟಕವಾಡಿ ನಂತರ ಮತ್ತೆ ಬಂದಿರದಿದ್ದ ಪತ್ರಿಕೆಯಾದ ಟೈ .ಆ .ಇ . ಹಾಜರಾತಿ ಜಾಗದಲ್ಲಿ 'ಎ ' ಎಂದು ಬರೆಯುವ ಮೂಲಕ ಅಬ್ಸೆಂಟ್ ಹಾಕಿದರು ಇಲ್ಲಿ ಸಾರ್ವಜನಿಕರು ಅರ್ಥಮಾದಿಕೊಲ್ಲಬೇಕಾದ ಒಂದು ವಿಷಯವೆಂದರೆ "ಈ ಯಪ್ಪಾ ಮೊದಲು ಬಂದಿದ್ದ ಬೇರೆ ಪತ್ರಿಕೆಗೆ 'ಪಿ 'ಯನ್ನು 'ಎ ' ಮಾಡುವ ಮೂಲಕ ಆಬ್ಸೆಂಟ್ ಹಾಕಿದ್ರಲ್ಲಾ,' ಅದು ತಿಳಿಯದೆ ಮಾಡಿದ ತಪ್ಪಲ್ಲ! ಬೇಕೆಂತಲೇ ಮಾಡಿದ ತಪ್ಪೂ ಹೌದು , ಏಕೆ ಗೊತ್ತಾ ನಿಮಗೆ ? ಇಲ್ಲೇ ಇರೋದು ಇವರ ಚಮತ್ಕಾರ 'ತನ್ನ ಈ/ಇಂಥಹ ತಪ್ಪನು ಮುಂದೆ ಶಿಸ್ತುಬದ್ದ ಅಧಿಕಾರಿಗಳೇನಾದರೂ ಪ್ರಶ್ನಿಸಿದಾಗ ಸಮಜಾಯಿಸಿ ನೀಡಿ ತಾನು ಕರ್ತವ್ಯನಿಷ್ಠನೆಂದು ತೋರಿಸಿಕೊಳ್ಳಲು ಈ ಬೇಕೆಂತಲೇ ಮಾಡಿದ ತಪ್ಪನ್ನು ಬಾಣವಾಗಿ ಉಪಯೋಗಿಸುತ್ತಾರೆ, ಅದು ಹೇಗೆಂದರೆ ಯಾರಾದರೂ ವಿಚಾರಿಸಿದಾಗ/ಪರಿಶೀಲಿಸಿದಾಗ 'ಎಲ್ಲಾ ಪತ್ರಿಕೆಗಳು ಬಂದಿರುತ್ತವೆ ಸರಿಯಾಗಿ ನೋಡದೆ ಆಬ್ಸೆಂಟ್ ಬಿದ್ದಿರುತ್ತೆ ,ಕೆಲವೊಮ್ಮೆ ಪ್ರೆಸೆಂಟ್ ಬಿದ್ದಿರುತ್ತೆ ಬೇಕಾದರೆ ನೋಡಿ ಇಲ್ಲಿ ಬಂದಿದ್ದ ಪತ್ರಿಕೆಯ ಹಾಜರಾತಿ ಜಾಗದಲ್ಲಿ 'ಪಿ ' ನಿಂದ 'ಎ " ಎಂದು ಬೇಕಂತಲೇ ತಪ್ಪು ಮಾಡಿದರಲ್ಲಾ ಅದನ್ನು ತೋರಿಸುತ್ತಾ ..'ನೋಡಿ ಇಲ್ಲಿ ಪತ್ರಿಕೆ ಬಂದಿದೆ ಆದರೆ ಆಬ್ಸೆಂಟ್ ಬಿದ್ದಿದೆ ಹಾಗೆಯೇ ಟೈ.ಆ.ಇ. ಪತ್ರಿಕೆಯ ವಿಷಯದಲ್ಲೂ ಹಾಗಿರಬಹುದಾದ ಸಾಧ್ಯತೆಗಳಿವೆಯಲ್ವೆ ಸರ್ ಎಂದು ಹೇಳಿ' ಕೇಳಿದವರಿಂದ ತನ್ನ ಮೇಲೆಯೇ ಅನುಕಂಪ ಗಿಟ್ಟಿಸಬಹುದೆಂಬ ಉಪಾಯ ಇವರದು.ಆದರೂ ಅಂತೂ ಇಂತೂ ನಮ್ಮ ವಿನಂತಿಯ ಮೇರೆಗೆ ಬಂದಿರದಿದ್ದ ಟೈ .ಆ .ಇ .ಪತ್ರಿಕೆಯ ಹಾಗರಾತಿಯನ್ನು ಶ್ರಮಪಟ್ಟು ಗೈರು ಮಾಡಿಸಿದೆವು.ಇದನ್ನು ವೀಕ್ಷಿಸುತ್ತಿದ್ದ ಸಹಾಯಕ ಮಹಿಳಾ ಸಿಬ್ಬಂದಿಯೂ ಇರೋ ಪತ್ರಿಕೆಗಳನ್ನೇ ಕಡಿಮೆ ಮಾಡೋಕೆ ಶಿಫಾರಸ್ಸಾಗ್ತಾಯಿದೆ ಟೈ .ಆ .ಇ . ಪತ್ರಿಕೆಯನ್ನೇ ನಿಲ್ಲಿಸಿಬಿಡ್ತೇವೆ ಎಂದು ಹೇಳುವ ಮೂಲಕ ಸಾರ್ವಜನಿಕ ಓದುಗರಿಗೆ ಎಚ್ಚರಿಕೆ ನೀಡಿ ತರಭೇತಿ ಪಡೆಯುವಲ್ಲಿನ ತಮ್ಮ ಶ್ರದ್ದೆಯನ್ನೂ ತಕ್ಷಣವೇ ತೋರಿಸಿದರು.
Wednesday, September 22, 2010
ನವ ತಂತ್ರಜ್ಞಾನವುಳ್ಳ ಸರ್ಕಾರಿ ಕಂಪನಿಗಳಿಂದ ನವೀನ ಶೈಲಿಯ ಬ್ರಷ್ಟಾಚಾರದ ಕರಿನೆರಳು
ಸ್ಪೈಸೆಸ್ ಬೋರ್ಡ್ ಕೊಚ್ಚಿ, ಸಿ -ಡಾಕ್ ಪುಣೆ ಇನ್ನು ಮುಂತಾದ ನವ ತಂತ್ರಜ್ನಾನವನ್ನಳವಡಿಸಿಕೊಂಡಿರುವ ಇನ್ನೂ ಹಲವು ಸರ್ಕಾರಿ ಕಂಪನಿಗಳು, ಅಷ್ಟೇ ಏಕೆ ಪುರಸಭೆ ಕೆ.ಆರ್.ಪೇಟೆಯಂತ ಕೆಲ ಸಾರ್ವಜನಿಕ ವಲಯದ ಸ್ಥಳೀಯ ಸರ್ಕಾರಿ ಸಂಸ್ಥೆಗಳು ಗಣಕೀಕೃತದ ಹೆಸರಿನಲ್ಲಿ ಇಂದು ದಿನ ಪತ್ರಿಕೆಗಳನ್ನೇ ಪ್ರಸ್ತುತ ವಿಧ್ಯಾಮಾನಗಳ ಮಾಹಿತಿಗೆ ಆಧಾರವಾಗಿರಿಸಿಕೊಂಡಿರುವ ಪಟ್ಟಣ ,ಅರೆ ಪಟ್ಟಣ, ಮತ್ತು ಗ್ರಾಮೀಣ ಪ್ರಧೇಶದ ಉದ್ಯೂಗಾಕಾಂಕ್ಷಿಗಳನ್ನು ಕಡೆಗಣಿಸಿ ತಮ್ಮ ಮೇಲೆ ತಾವೇ ಸಂಶಯ ತಂದುಕೊಳ್ಳುತ್ತಿವೆ ತಾಂತ್ರಿಕವಾಗಿ ಮುಂದುವರೆದ ಕೆಲ ಸರ್ಕಾರಿ ಸ೦ಸ್ಥೆಗಳು ಮತ್ತು ಇಂಥಹ ವ್ಯವಸ್ಥೆಯಿಂದಲೂ ಸಹ ಬ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತಿದೆ ಇಂಥಹ ಕಂಪನಿಗಳು ತಾವು ಗಣಕೀಕೃತಗೊಂಡಿರುವ ಉಮ್ಮಸ್ಸಿನಲ್ಲಿ ಪೂರ್ವಗ್ರಹ ಪೀಡಿತವಾಗಿ ಯೋಚಿಸಿ ಇಡೀ ದೇಶವೇ ಗಣಕೀಕೃತಗೊಂಡಿಬಿಟ್ಟಿದೆ ಎಲ್ಲರು ನಮ್ಮ ಸಂಸ್ಥೆ ಗಳ ಉದ್ಯೋಗಗಳ ಹಾಗು ಇತರೆ ಆಗು ಹೋಗುಗಳ ಬಗ್ಗೆ ಅಂತರ್ಜಾಲದಲ್ಲೇ ತಿಳಿಯುವ ಸೌಲಭ್ಯ ಪಡೆದೆ ಇರುತ್ತಾರೆ ನಾವೇಕೆ ಸಂಪೂರ್ಣ ವಿವರದ ಜಾಹಿರಾತನ್ನು ಪತ್ರಿಕೆಗಳಲ್ಲೂ ಹಾಕಿಸುವ ರಿಸ್ಕ್ ತೆಗೆದು ಕೊಳ್ಳೋದು ಎಂಬ ತಪ್ಪು ತಿಳುವಳಿಕೆಯಿಂದೆಲೋ ಏನೋ ತಮ್ಮ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳ ಬಗ್ಗೆ ಪತ್ರಿಕೆಗಳಲ್ಲಿ ನೆಪ ಮಾತ್ರಕ್ಕೆ ತಿಳಿಸಿ ಹೆಚ್ಚಿನ ವಿವರ ಬೇಕಾದಲ್ಲಿ ಈ ವೆಬ್ಸೈಟ್ ನೋಡಿ ಆ ವೆಬ್ಸೈಟ್ ನೋಡಿ ಎಂದು ಹೇಳಿ ಕೈ ತೊಳೆದು ಕೊಳ್ಳುತ್ತಿವೆ ಮತ್ತು ಅಕಸ್ಹ್ಮಾತ್ ಇಂತಹ ಜಾಹಿರಾತನ್ನು ಯಾರಾದರೂ ಆಶಕ್ತ ನಿರುದ್ಯೋಗಿಗಳು ನೋಡಿ ಸಂಪೂರ್ಣ ವಿವರದ ಸಲುವಾಗಿ ಜಾಹಿರಾತಿನಲ್ಲಿದ್ದ ವೆಬ್ಸೈಟ್ಗಳನ್ನು ಸಂಪರ್ಕಿಸಿದರೆ ಅಲ್ಲಿ ಸಮಯ ಹಾಳಾಗುವುದರ ಜೊತೆಗೆ ತಮ್ಮ ಇ -ಮೇಲ್ ಪೆಟ್ಟಿಗೆಯೊಳಗೆ ವೈರಸ್ ಗಳು ನುಸುಳಲು ಮಾರ್ಗ ಸೂಚಿಸಿದ೦ತಾಗುತ್ತದೆ ಹಾಗು ಸಿಗುವ ಮಾಹಿತಿ ಕೇವಲ ಶೂನ್ಯ ಏಕೆಂದರೆ ಇಂಥಹ ವೆಬ್ಸೈಟ್ ಗಳ ಉಸ್ತುವಾರಿಕೆಗೆ ನೇಮಕಗೊಂಡಿರುವ ಸಿಬ್ಬಂದಿಗಳು ಸರಿಯಾಗಿ ಉಸ್ತುವಾರಿ ನೋಡಿಕೊಳ್ಳದೆ ಆ ವೆಬ್ಸೈಟ್ಗಳು ಕಂಪ್ಯೂಟರ್ ವೈರಸ್ ಗಳ ತಾಣವಾಗಿರುತ್ತವೆ ಅಥವಾ ಆ ಉಸ್ತುದಾರಿ ನೋಡಿಕೊಳ್ಳುವವರಿಗೆ ತಮ್ಮ ಸಂಸ್ಥೆಯಲ್ಲಿನ ಹುದ್ದೆಗಳ ಜಾಹಿರಾತಿನ ಬಗ್ಗೆ ತಿಳಿದೇ ಇರುವುದಿಲ್ಲ ಇವರಿಗೆ ಕೆಲವೊಮ್ಮೆ ಕರೆ ಮಾಡಿದ ನಿರುದ್ಯೋಗಿಗಳಿಂದ ತಿಳಿಯುವುದುಂಟು. ಇನ್ನೂ ಕೆಲ ವೆಬ್ಸೈಟ್ ಗಳಲ್ಲಿ ಹುದ್ದೆ ಗಳ ಸಂಪೂರ್ಣ ಮಾಹಿತಿ ಸಿಗುವ ಪೇಜ್ ಡೌನ್ಲೋಡ್ ಮಾಡಿಕೊಳ್ಳಲು ನಿರುದ್ಯೋಗಿ ಆಶಕ್ತರಿಗೆ ಆಗುವುದೇ ಇಲ್ಲ ಕೆಲವೊಮ್ಮೆ ತ್ರಾಸಧಾಯಕವಾಗುವ ಹಾಗೆ ಅಥವಾ ಶ್ರಮಧಾಯಕವಾಗುವ ಹಾಗೆ ಕಷ್ಟಕರ ರೀತಿಯಲ್ಲಿ ತ೦ತ್ರಾ೦ಶ ಅಭಿವೃದ್ದಿ ಪಡಿಸಿರಲೂ ಬಹುದು ಇದು ಕೆಲ ಸಂಸ್ಥೆಗಳಲ್ಲಿ ನಿಜವಾಗಿರುತ್ತದೆ ಕೂಡ ಈ ರೀತಿಯ ದೋಷಗಳಿಂದ ಆಶಕ್ತರು ನಿರುತ್ಸಾಹ ತೋರಿ ಕೆಲಸಕ್ಕೆ ಕನಿಷ್ಠ ಪಕ್ಷ ಅರ್ಜಿ ಹಾಕುವ ದೈರ್ಯದಿಂದ ಹಿಂದೆ ಸರಿಯುವುದರಿಂದ ಆಯಾ ಸಂಸ್ಥೆಗಳ ಉದ್ಯೋಗಿಗಳ ಕಡೆಯಿಂದ ಈ ಬಗ್ಗೆ ವಿಷಯ ತಿಳಿದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪೈಪೋಟಿ ಕಡಿಮೆಯಾಗಿ ಹೆಚ್ಚು ಹುದ್ದೆಗಳಿಗೆ ಹಾಲಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರ ಪರಿಚಯಸ್ತರು /ಸ೦ಭ೦ಧಿಕರು ಆಯ್ಕೆಯಾಗುವ ಸಾಧ್ಯತೆಗಳಿರುತ್ತವೆ ಮತ್ತು ಇಂಥಹ ಘಟನೆಗಳಿಂದ ಬ್ರಷ್ಟಾಚಾರ ನಡೆದಿರುವ ಸಂಭವವಿರುತ್ತದೆ. ಸಾಮಾನ್ಯವಾಗಿ ಇಂಥಹ ದುರುದ್ಧೇಶಪೂರಿತ ವೆಬ್ ಸಮಸ್ಯೆಗಳಿಗೆಲ್ಲಾ ಹಿಂದಿರುವ ಉದ್ದೇಶವೇ ಬ್ರಷ್ಟತೆ ಅಥವಾ ಬ್ರಷ್ಟಾಚಾರವೆಸಗುವುದಾಗಿರುತ್ತದೆ .ಇತ್ತೇಚೆಗೆ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಅಪಾರಧರ್ಶಕತೆ ಪ್ರದರ್ಶಿಸಿ ಇದರ ಬಗ್ಗೆಯೂ ಅನುಮಾನವನ್ನು ಪಡುವ ಹಾಗೆ ಮಾಡಿಕೊಂಡ ಮತ್ತೊಂದು ಮಹತ್ತರ ಸಂಸ್ಥೆಯೇ ಏರ್ ಫೋರ್ಸ್ ಸ್ಕೂಲ್ ಹೆಬ್ಬಾಳ ಬೆಂಗಳೂರು.
ಈ ಯಮ್ಮ ಲೈಬ್ರರಿಗೆ ಬರೋದು ಟೈಮ್ ಪಾಸ್ ಮಾಡುವುದಕ್ಕಂತೆ!
ದಿನಾಂಕ ೩೦ ಜೂನ್ ೨೦೧೦ ರಂದು ಇದ್ದಕ್ಕಿದ್ದ೦ತೆಯೆ ಒಬ್ಬ ಮಹಿಳಾ ಸಿಬ್ಬಂದಿ ಕೆ.ಆರ್. ಪೇಟೆಯ ಗ್ರಂಥಾಲಯದಲ್ಲಿ ಸದ್ದಿಲ್ಲದೇ ವಕ್ಕರಿಸಿದರು ಇವರ ಬಗ್ಗೆ ಓದುಗರಿಗೆ ಪರಿಚಯ ಮಾಡಿಕೊಡುವ ಗೋಜಲಿಗೆ ಸದ್ಯದ ಗ್ರಂಥ ಪಾಲಕರು ಹೋಗಲೇ ಇಲ್ಲ ಸಾರ್ವಜನಿಕರು ಕೇಳಿದರೂ ಕೂಡ ಆ ಮಹಿಳೆಯೂ ತಿಳಿಸುವ ಕೆಲಸಕ್ಕೆ ಕೈ ಹಾಕಿಲ್ಲ ಏನೇ ಇರಲಿ ಇವರು ಹೊಸದಾಗಿ ಬಂದಿರೋ ಸಿಬ್ಬಂದಿಯ ಕಾರ್ಬಾರ್ ನೋಡ್ತಾ ಇದ್ರೆ ಸಹಾಯಕ ಗ್ರಂಥಪಾಲಕಿಯಾಗಿರಬಹುದೇನೋ ಎಂದೆನಿಸುತ್ತದೆ. ಆದರೂ ಈ ಯಮ್ಮ೦ದೂ ಅದೇ ಗೋಳು, ಕೆಲಸ ಸರಿಯಾಗಿ ಮಾಡೋಲ್ಲಾ ಬಂದಿರದ ಪತ್ರಿಕೆಗಳ ಬಗ್ಗೆ ವಿಚಾರಿಸಿದರೆ ಯಾರೋ ಓದೋಕ್ ಬರೋರು ತೆಗೆದುಕೊಂಡು ಹೋಗಿರಬಹುದೆಂದು ಸಲೀಸಾಗಿ ಬೇಜವ್ಬಾರಿ ಜವಾಬ್ ಕೊಡೋದನ್ನ ಪ್ರಾಕ್ಟಿಸ್ ಮಾಡ್ತಾ ಇದ್ದಾರೆ. ಇವರು ಇಲ್ಲಿಗೆ ಬರೋ ಸೂಚನೆ ಇರಲಿಲ್ಲ ಎಲ್ಲಾ ನಮ್ಮ ಹಿಂದಿನ ಅಂದರೆ ಏಪ್ರಿಲ್ ತಿಂಗಳ ಸುದ್ದಿಯ ಮಹಿಮೆ ನೋಡಿ ಎಲ್ಲಿ ನಮ್ಮ ಓದುಗರು ತಾನು(ಗ್ರಂಥ ಪಾಲಕರು ) ಎಲ್ಲಿಗೆ ಬೇಕೋ ಅಲ್ಲಿಗೆ ಹೇಳ್ದೆ ಕೇಳ್ದೆ ಹೋಗೋದನ್ನ ಪ್ರಶ್ನಿಶ್ತಾರೋ ಎಂದು ತನಗೊಬ್ಬರು ಸಹಾಯಕರಿಗೆ ಶಿಫಾರಸ್ಸು ಮಾಡಿರಬಹುದೇನೋ ಅದಕ್ಕೆ ಈ ಯಮ್ಮ ಬಂದಿದ್ದಾರೆ ಈ ಯಮ್ಮನಿಗೆ ಲೈಬ್ರರಿಯ ಟೈಮಿಂಗ್ಸ್ ಹೇಳಿ ನೋಡೋಣವೆಂದರೆ ಬೋರ್ಡ್ ನೋಡಿಕೊಂಡು ಹೇಳೋ ಈ ಯಮ್ಮ ಹಿಂದೆ ಬೇರೆಲ್ಲೋ ಕೆಲಸ ಮಾಡಿ ಇಲ್ಲಿಗೆ ವರ್ಗಾವಣೆ ಆಗಿದ್ದಾರೆ ಎಂದರೆ ಖಂಡಿತ ಯಾರು ನ೦ಬುವುದಿಲ್ಲಾ ಏಕೆಂದರೆ ಈ ಯಮ್ಮನಿಗೂ ಕೂಡ ಗ್ರಂಥಾಲಯ ಕೆಲಸದ ಅ ಆ ಇ ಈ ಗೊತ್ತಿಲ್ಲಾ ಎಂದು ಆಗಲೇ ಎಲ್ಲರಿಗೂ ಗೊತ್ತಿರೋ ವಿಷಯ. ಅಕಸ್ಮಾತ್ ಹೊಸ ನೇಮಕಾತಿಯಾಗಿದ್ದರೆ ಇದು ೯೯% ಲೇಟೆಸ್ಟ್ ಅಕ್ರಮ ನೇಮಕಾತಿಯಾಗಿರುತ್ತದೆ ಏಕೆಂದರೆ ಗ್ರಂಥಾಲಯ ಇಲಾಕೆಯಿ೦ದ ಯಾವಾಗ ಸಾರ್ವಜನಿಕ ಜಾಹಿರಾತು ನೀಡಿದ್ದರು ತೋರಿಸಲಿ ನೋಡೋಣ? ನೆನ್ನೆ ಕನ್ನಡ ಪ್ರಭ ಪತ್ರಿಕೆಯಲ್ಲಿ ಕೂಡ ಗ್ರಂಥಾಲಯದ ನೇಮಕಾತಿಗಳ ಬಗ್ಗೆ ಪ್ರಕಟಿಸಿರುವ ವರದಿಯನ್ನು ಕಣ್ಣಾಡಿಸಿದರೆ ಇಲ್ಲಿನ ಹೆಚ್ಚು ನೆಮಕಾತಿಗಳೆಲ್ಲಾ ಅಕ್ರಮಗಳೆ ಎನ್ನುವುದನ್ನ ನ೦ಬಲೆಬೇಕು. ನಾನ್ ಹೆಂಗ್ಸು ಮನೆಗೆ ಬೇಗ ಹೋಗ್ಬೇಕು ಬೇಗ ಬಾಗಿಲು ಹಾಕ್ಬೇಕು ದಯವಿಟ್ಟು ಹೋಗಿ ಎಂದು ಸಾರ್ವಜನಿಕರನ್ನ ಕೇಳೋದು, ಒಬ್ಬರೋ ಇಬ್ಬರೋ ಯಾಕೆ ಹಿಂಗೆ ? ೮ ಗಂಟೆವರೆಗೂ ಇರಬೇಕು ಕಂಡ್ರಿ ಅಂತಂದ್ರೆ ೭ /೭:೩೦ ರವರೆಗೆ ಮಾತ್ರ ಇರ್ತೇವೆ ಅದೂ ಕರೆಂಟ್ ಸೌಲಭ್ಯ ಬಂದ್ರೆ ಇಲ್ಲಾಂದ್ರೆ ನಿಮ್ಮ ಪಾಡು ಅಲ್ಲಿವರೆಗೂ ನನ್ನ ಬೇಗ ಮನೆಗೆ ಕಳಿಸಿ ನನಗೂ ಗಂಡ ಮಕ್ಳು ಅವ್ರೆ ಎಂದು ಬಂದ ಪ್ರಾರಂಭದ ದಿನಗಳಲ್ಲಿ ನಯವಾಗಿ ಉತ್ತರಿಸುತ್ತಿದ್ದ ಈ ಯಮ್ಮ ಬರು ಬರುತ್ತಾ ಸಾಯಂಕಾಲದ ಹೊತ್ತಿನಲ್ಲಿ ಸಾರ್ವಜನಿಕರಿಗೆ ವಯಕ್ತಿಕವಾಗಿ ಭಯವೊಡ್ಡಿ ಅವರು ಮನೆಗೆ ಹೊರಡಲು ಮಾನಸಿಕ ಒತ್ತಡ ತರುವುದೇ ಈ ಹೊಸ ಯಮ್ಮನ ಕಾಯಕವಾಗಿದೆಯಂತೆ (ಸಾರ್ವಜನಿಕರು ಗುಂಪಿನಲ್ಲಿ ಓದುತ್ತಿದ್ದಾಗ ರಿಕ್ವೆಸ್ಟ್ ಮೂಲಕ ಬಾಗಿಲು ಮುಚ್ಚಲು ಅನುಮತಿ ಕೇಳುವ ಈ ಯಮ್ಮ , ಕೊನೆಯಲ್ಲಿ ಒಬ್ಬೊಬ್ಬರೇ ಸಿಕ್ಕಿದರೆ ಶುರು ಮಾಡುತ್ತಾರೆ ಬೈಗುಳದ ಮಾತುಗಳನ್ನು. ಬೆಳಿಗ್ಗೆ ಹೊತ್ತು ಗೌರಮ್ಮನ ಗೆಟಪ್ನಲ್ಲಿ ಪೋಜ್ ಕೊಡೊ ಈ ಯಮ್ಮ ಸಂಜೆ ವೇಳೆ ತನ್ನ ಸೋಮಾರಿತನವನ್ನು ದೂಷಿಸುವ ಪ್ರಾಮಾಣಿಕ ಸೇವಾ ಮನೋಭಾವವುಳ್ಳ ಓದುಗರು ಏನಾದರೂ ಒಬ್ಬರೇ ಓದುತ್ತಾ ಉಳಿದರೆ/ಸಿಕ್ಕಿದರೆ ಅದರಲ್ಲೂ ತನ್ನನ್ನು ಪ್ರಶ್ನಿಸುವ೦ಥವರು ಏನಾದರೂ ಕೊನೆಯಲ್ಲಿ ಓದುತ್ತಾ ಒಂಟಿ ಕುಳಿತಿದ್ದರೆ ಶುರು ಮಾಡುತ್ತಾಳೆ ತನ್ನ ಫೋನ್ ಮಾಡುವ ನೆಪದಲ್ಲಿ ಓದುಗರನ್ನು ಬೈಯ್ಯುವುದು ಹೇಗೆಂದರೆ "ರೀ ಎಲ್ಲಿದ್ದೀರಿ ಲೈಬ್ರರಿ ಹತ್ರ ಬನ್ನಿ, ಒಂದು ಗೂಬೆ ಇನ್ನು ಓದುತ್ತಾ ಕುಂತೈತೆ ಅದು ಸುಮ್ಮನೆ ಹೊರ ಹೋಗುವುದಿಲ್ಲವಲ್ಲ ಅದಕ್ಕೆ ಮನೆಗೆ ಬರೋದ್ ಲೇಟ್ ಹಾಗಂಗಿದೆ ಎಷ್ಟಾದರೂ ಹಠಮಾರಿ ಗೂಬೆ ಅಲ್ವೇ ಅದು, ನೀವು ಇಲ್ಲಿಗೆ ಬಂದ್ ನೀವೊಂದ್ಸಾರಿ ಹೇಳಿ ಗೂಬೆಗೆ' ಕೇಳುತ್ತೋ ಏನೋ ನೋಡೋಣ" (ಈ ಯಮ್ಮನ ಯಜಮಾನರು ಬಂದು) "ನಿನಗೆ ಬೆಲೆ ಕೊಡೊಲ್ಲಾ ಎಂದರೆ ನನ್ನ ಮಾತು ಕೇಳುತ್ತಾ? ಇರು ಈ ಗೂಬೆ ಕಳಿಸೋಕೆ ನಮ್ಮ ಪಕ್ಕದ ಕಚೇರಿಯಯವರನ್ನು ಸಲಹೆ ಕೇಳೋಣ ಎಂದು ತಾವೇ ತೀರ್ಮಾನಿಸಿ ಸಲಹೆ ಕೇಳಿ ಬಂದು ನಂತರ ಮಾತನಾಡಿದ ಮಾತುಗಳು ನಿಜಕ್ಕೂ ಓದುಗರು ಖಂಡಿಸುವಂತ ಮಾತುಗಳು ಅವುಗಳೇನೆಂದರೆ "ನಿಂದು ಜಾಸ್ತಿ ಆಯಿತು ಬೇರೆಯವರೆಲ್ಲಾ ೬-೬:೧೫ ಕ್ಕೆ ಹೊಂಟೋಗಲ್ವಾ? ಬೆಳಿಗ್ಗೆ ಹೊತ್ತು ಅದಿಲ್ಲಾ ಇದಿಲ್ಲಾ ಅಂತ ತಲೆ ತಿಂತೀಯಾ, ಇಲ್ಲಿ ಇಷ್ಟೊತ್ತಿನಲ್ಲಿ ಪೇಪರ್ ಇಡ್ಕೋ೦ಡು ಸುಮ್ನೆ ಕೂತ್ಕೊತೀಯಲ್ಲಾ ಗೊತ್ತಾಗೊಕಿಲ್ವಾ ?" ನನಗೇನೋ.. ನೀನು' ಬೇಕು ಬೇಕು ಅಂತಲೇ ಕೂತ್ಕೊತೀಯಾ ಅನ್ಸುತ್ತೆ ,ನಂಗೆ ಗೊತ್ತಾಗೊಲ್ವ ನಿನ್ ಪ್ಲಾನು, ಇವತ್ತೇ ಲಾಸ್ಟು ಇನ್ನೊಂದಿವ್ಸ ೬ ಗಂಟೆ ಮೇಲೆ ಇಲ್ಲಿ ಕೂತ್ಕೊಂಡು ಇರೋದ್ ಕಂಡ್ರೆ ಕೂಕಬುಡ್ತೀನಿ" ಜೊತೆಗೆ ರಾತ್ರಿ ೯ ಗಂಟೆಗ೦ಟ ಮನೆಗೆ ಹೋಗಬೇಡಾ ,ಲೈಬ್ರರಿ ಬಾಗಿಲು ಮುಚ್ಚಬೇಡ ಇಲ್ಲೇ ಇರು ಅಂತ ಹಿಂಸೆ ಕೊಡ್ತಾನೆ ಅಂತ ಜನರ ಕರ್ದು ಒಪ್ಪಿಸ್ತೀನಿ' ಆಮೇಲೆ ಎನೈತದೆ ಅಂತ ನಿಂಗೆ ಗೊತ್ತೈತಲ್ಲಾ, ಇವರಪ್ಪನ ಮನೆಯಿಂದ ಸಂಬಳ ಕೊಡುಸುತ್ತಿರೋನಂಗೆ ಕೂತ್ಕೊಂಡುಬಿಡ್ತಾನೆ, ಕರೆಂಟ್ ಬೇರೆ ಮೊದ್ಲೇ ಇಲ್ಲಾ ಲೈಬ್ರರಿಲಿ . ಇನ್ನು ಇಲ್ಲೇ ಇದ್ರೆ ಕೂಡಿ ಹಾಕಿ ಬೀಗ ಹಾಕ್ಕೊಂಡು ಹೊಂಟೋಯ್ತೀನಿ " ಎಂದು ಒಂದಿನ ಗುಟುರು ಹಾಕಿದ್ದನ್ನು ಕಂಡು ಈ ಯಮ್ಮನ ಅಸಲಿ ಅವತಾರ ನೋಡಿ ಸ್ವಲ್ಪ ಭಯವು ಉಂಟಾಯಿತು. ಓದುಗರು ಒಬ್ಬರಿಗಿಂತ ಹೆಚ್ಚಿದ್ದರೆ ಈ ಯಮ್ಮ ತನ್ನ ವರಸೆ ತೋರುವುದು ವಿರಳವಾದರೂ ಕೆಲವರಂತೂ ಈ ಯಮ್ಮ ಸಂಜೆ ವೇಳೆ ಗ್ರಂಥಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದರೆ ಸಾಕು ನೋಡಿ ವಾಪಸ್ಸು ಮನೆ ಕಡೆ ಹೊರಡುವ ಸ್ಥಿತಿಯಿದೆ. ಈಗ ಸಂಜೆವೇಳೆ ಕರ್ತವ್ಯ ನಿರ್ವಹಿಸುವ ಸಂಧರ್ಭ ಬಂದರೆ ತಮ್ಮ ಯಜಮಾನರನ್ನು ಜೊತೆ ಕರೆತರುತಾದರೂ ಅಷ್ಟೇ ಬೇಗನೆ ಹೊರಟುಬಿಡುತ್ತಾರೆ. ಅಂದ ಹಾಗೆ ಈ ಲೈಬ್ರರಿ ಕರೆಂಟ್ ಬಗ್ಗೆ ಲೇಟೆಸ್ಟ್ ಸುದ್ದಿಯೆಂದರೆ ಈ ಗ್ರಂಥಾಲಯದ ಮೀಟರ್ ಬೋರ್ಡ್ ಪಕ್ಕದಲ್ಲಿರುವ ಖಾಸಾಗಿ ಪತ್ರಿಕಾ ಕಾರ್ಯಕರ್ತರ ಸ೦ಸ್ಥೆ ಯಲ್ಲಿದೆಯಂತೆ!, ವಿದ್ಯುತ್ ಸೌಲಭ್ಯವಿಲ್ಲದ ಈ ಗ್ರಂಥಾಲಯಕ್ಕೆ ಬಿಲ್ಲಂತೂ ತಪ್ಪದೆ ಬರುತ್ತಂತೆ! ಮುನ್ಸಿಪಾಲಿಟಿ ಚೀಫ್ ಆಫೀಸೆರ್ ಹೆಸರಿಗೆ ನೀಡುತ್ತಿರುವ ಕೆ ಆರ್ ಪಿ ಸಿ ಎಲ್ ೬೦೭ ನ೦ಬರಿನ ವಿದ್ಯುತ್ ಬಿಲ್ಲನ್ನು ಅರ್ಧ ಗ್ರಂಥಾಲಯ ಇಲಾಕೆ ಬರಿಸುತ್ತಂತೆ! ೧೩ ಸೆಪ್ಟೆಂಬರ್ ೨೦೧೦ ದಿನಾಂಕವಿದ್ದ ಬಿಲ್ ಬಂದದ್ದನ್ನು ಕಂಡ ಗ್ರಂಥಾಲಯ ಓದುಗರು ಪ್ರಶ್ನಿಸಿದ್ದಕ್ಕೆ ಈ ರೀತಿಯಾಗಿ ಆ ದಿನ ಗ್ರಂಥಾಲಯದಲ್ಲಿದ್ದ ಅಲ್ಲಿನ ಕೇವಲ ಪ್ರಮುಖ ದಿನಗಳಲ್ಲಿ ಅಧಿಕಾರಿಗಳ ಆಧೆಶಕ್ಕನುಗುಣವಾಗಿ ಗ್ರಂಥಾಲಯದಲ್ಲಿ ಪ್ರತ್ಯಕ್ಷವಾಗುವ ಹಂಗಾಮಿ ಗ್ರೂಪ್ 'ಡಿ' ಸಿಬ್ಬಂದಿಯೊಬ್ಬರು ತನಗೆ ಉದ್ಯೋಗ ಭರ್ತಿ ಸಿಕ್ಕಿಲ್ಲದಿದ್ದರೂ ನನಗಿಂತಲೂ ನಂತರ ಬಂದ ಅಂದರೆ ಇತ್ತೀಚಿನ ಕೆಲ ದಿನಗಳಲ್ಲಿ ಬಂದ ಮಹಿಳಾ ಸಿಬ್ಬಂದಿ ಆರಾಮಾಗಿ ಕುಳಿತುಕೊಳ್ಳುತ್ತಾರೆ ಹಾಗೂ ನನಗೆ ಉತ್ತಮ ಸಂಬಳವೂ ಸಿಗುತ್ತಿಲ್ಲ ಎಂದು ಆಪಾಧಿಸುತ್ತಾ ವಿದ್ಯುತ್ಪಕ್ತಿ ಕಥೆಯನ್ನು ತಮ್ಮ ಓದುಗ ಸ್ನೇಹಿತರೊಬ್ಬರಿಗೆ ವಿವರಿಸುತ್ತಿರುವಾಗ ಬೇರೆ ಓದುಗರಿಗೂ ವಿಷಯ ತಿಳಿಯಿತು.ಅಕ್ರಮ ವೈದ್ಯಕೀಯ ನೇಮಕಾತಿಗಳಂತೆ ಅಕ್ರಮ ಗ್ರಂಥಾಲಯ ನೇಮಕಾತಿ ತನಿಖೆ ಮಾಡಿದರೆ ನಿಜಕ್ಕೂ ಅಕ್ರಮಗಳ ಸರಮಾಲೆಗಳೇ ಸಿಗಲಿವೆ. ಈ ಬಗ್ಗೆ ಕ್ರಮ ಕೈಗೊಂಡು ಅವಶ್ಯಕತೆಯಿರುವ ಬಡ ನಿರುದ್ಯೋಗಿಗಳಿಗೆ ನ್ಯಾಯ ಒದಗಿಸಿ ಕೊಡಬೇಕಾಗಿ ಸಂಭಂದ ಪಟ್ಟವರಿಗೆ ನಮ್ಮ ನಯವಾದ ರಿಕ್ವೆಸ್ಟ್.
Monday, April 19, 2010
ತಕ್ಕನಿಗೂ .. ಮುಕ್ಕನಿಗೂ.. ಜೋಡಿ, ಇದು ಕೆ.ಆರ್.ಪೇಟೆ ಗ್ರಂಥಾಲಯ ಮತ್ತು ಮುನ್ಸಿಪಾಲ್ಟಿ ಸರ್ಕಾರಗಳ ಮೋಡಿ!
ಇದು ಕೆ.ಆರ್.ಪೇಟೆ ಗ್ರಂಥಾಲಯದ ಕಥೆ ಮಾತ್ರವಲ್ಲ, ಇಂಥ ಎಷ್ಟೋ ಗ್ರಂಥಾಲಯಗಳಲ್ಲಿ ಇದೇ ಸ್ಥಿತಿಯಿದೆ ಆದರೆ ಕೇಳೋರ್ ದಿಕ್ಕಿಲ್ಲಾ ಅಷ್ಟೇ . ನಿಮಗೆ ಗೊತ್ತ ಈ ಹಿಂದೆ ಒಬ್ಬರು ಗ್ರಂಥ ಪಾಲಕರು ಇದ್ದರು ಅವರು ಸುಮಾರಾಗಿ ಕೆಲಸ ಮಾಡ್ತಿದ್ರು, ಆದರೆ ಅವರು ಸುಮಾರು ಒಂದೊರ್ಷದ ಹಿಂದೆ ತಮ್ಮ ಊರಿಗೆ ಹತ್ರ ಹಾಗೋ ಹಾಗೆ ವರ್ಗಾವಣೆ ಮಾಡಿಸ್ಕೊಂಡಿದ್ದಾರೆ. ಈಗ ಈ ತಾಲೋಕ್ ಗ್ರಂಥಾಲಯದಲ್ಲಿ ಕೆಲಸ ಮಾಡ್ತಿರೋದು ಗ್ರಾಮಪಂಚಾಯಿತಿ ಗ್ರಂಥಾಲಯಕ್ಕೆ ನೇಮಕ ಮಾಡಿಕೊಂಡಿರೋರಿರಬಹುದೇನೋ ಅಂತ ನಮ್ಮ ಅನಿಸಿಕೆ. ಈ ಗ್ರಂಥಾಲಯಕ್ಕೆ ಈಗ ಇವರೇ ಮೇಲ್ವಿಚಾರಕರಂತೆ. ಇನ್ನೊಂದು ವಿಷಯ ಅಂದ್ರೆ ಇಲ್ಲೊಬ್ಬ ಸಹಾಯಕ ಅಂತ ಬೇರೆ ಇದ್ದಾರೆ ನಮಗೆ ತಿಂಗಳಿಗೆ ೫೦೦-೭೫೦ ರೂಪಾಯಿ ಕೊಡ್ತಾರೆ ಆದರೂ ಕೆಲಸ ಮಾಡ್ತಿದ್ದೀವಿ ಅಂತ ಕೇಳಿದೋರಿಗೆ ಮಾತ್ರ ಹೇಳ್ತಾರೆ,ನಮ್ಮಗೆ ಗೊತ್ತಿರೋ ಹಾಗೆ' ಆ ಮೇಲ್ವಿಚಾರಕರಿಲ್ಲದಾಗ ಈ ಸಹಾಯಕರು ಮೇಲ್ವಿಚಾರಕರಾಗ್ತಾರೆ! ಇವರಿಗೆನಾದ್ರು ತುಂಬಾ ವಯಕ್ತಿಕ ಕೆಲಸವಿದ್ದರೆ ತಮ್ಮ ತಂದೇನೋ/ಗೊತ್ತಿರುವ ವ್ಯಕ್ತಿಯನ್ನ ಮೇಲ್ವಿಚಾರಕರ ಹುದ್ದೆಗೆ ನೇಮಿಸ್ಬಿಡ್ತಾರೆ, ಹೀಗಿರಬೇಕಪ್ಪ' ಒಬ್ಬರಿಗೊಬ್ಬರ ಸಹಕಾರ ಅಂದ್ರೆ !,ಈ ರೀತಿ ನೇಮಕಗೊಂಡ ವ್ಯಕ್ತಿ ತಮಗೆ ಮನೆಕಡೆ ಏನಾದ್ರೂ ಕೆಲಸ ಇದ್ದರೆ ಒಂದೊತ್ತು ಮಾತ್ರ ಬಾಗಿಲು ತೆಗೆದು ಮತ್ತೊಂದೊತ್ತಿಗೆ ಚಕ್ಕರ್.ಅಷ್ಟಕ್ಕೂ ಇಲ್ಲಿ ಇವರೇನೂ ಘನ೦ಧಾರಿ ಕೆಲಸ ಏನ್ ಮಾಡೋಲ್ಲ ಬೆಳಿಗ್ಗೆ ೯:೩೦-೯:೪೫ ರ ಸುಮಾರಿಗೆ ಬಾಗಿಲು ತೆಗೆಯೋದಂತೂ ಗ್ಯಾರಂಟಿಯಂತೆ! ಒಂದು ದಿವಸ ಕನ್ನಡ ಪತ್ರಿಕೆ ಇದ್ರೆ ಆಂಗ್ಲ ಪತ್ರಿಕೆ ಇರೋಲ್ಲಾ , ಆಂಗ್ಲ ಪತ್ರಿಕೆ ಇದ್ರೆ ಕನ್ನಡ ಪತ್ರಿಕೆ ಇರೋಲ್ಲಾ, ಪತ್ರಿಕೆಗಳಿದ್ದರೂ ಒಳಪುಟಗಳ ಗ್ಯಾರಂಟಿ ಇಲ್ಲ, ವಾರ ಪತ್ರಿಕೆ, ಮಾಸ ಪತ್ರಿಕೆಗಳದ್ದು ಅದೇ ಗೋಳು, ಸರ್ಕಾರಿ/ಇತರೆ ರಜಾ ದಿನಗಳ ಪತ್ರಿಕೆಗಳು ಸಿಕ್ಕಿದ್ರೆ ಓದುಗರ ಅದೃಷ್ಟವೇ ಸರಿ . ಯಾರಾದ್ರೂ ಇದರ ಬಗ್ಗೆ ಬೇಜಾರಾಗಿ ಕೇಳಿದರೆ ಪೇಪರ್ನೋರು ಹಾಕೆ ಇಲ್ಲ ಅನ್ನೋ ಉತ್ತರ ರೆಡಿ ಇರುತ್ತೆ, ಅದಕ್ಕೂ ಮೀರಿ ಪತ್ರಿಕೆಗಳ ನೋಂದಣಿ ಪುಸ್ತಕ ತೋರಿಸಿ ಅಂದು ಬಿಟ್ಟರೆ ಸಾಕು', ಬಂದಿರಬಹುದು' ಇದ್ರೆ ಅಲ್ಲೇ ಇರುತ್ತೆ ಇಲ್ಲಾಂದ್ರೆ ಯಾರೋ ಎಗರಿಸಿರ್ತಾರೆ ಬಿಡಿ ಅನ್ನೋ ಬೇಜವಾಬ್ದಾರಿ ಉತ್ತರ ಕೊಡೋದ್ರಲ್ಲಿ ನಿಸ್ಸೀಮರು. ಗಡಿಯಾರಕ್ಕೂ ಕೂಡ ತಮಗೆ ಬೇಕಾದ ರೀತಿ ತರಬೇತಿ ನೀಡಿದ್ದಾರೆ ೧೧:೫೦ ಕ್ಕೆ ಹೊರ ಹೊರಡಲು ಸಿದ್ದತೆ ನಡೆಸಿದರೂ ಮುಚ್ಚೋದು ಮಾತ್ರ ಖಡಕ್ ಮದ್ಯಾಹ್ನ ೧೨ ಕ್ಕೆ ,ಅಬ್ಬಾ ಎಂತಾ ಶಿಸ್ತು ಅಂತ ಅನ್ನೋಕೆ ಶುರು ಮಾಡಿದ್ರೆ ಮೇಲ್ವಿಚಾರಕರು ತಿಂಗಳಿಗೆ ೩-೬ ದಿನ ಇರೋಲ್ಲ ಸಹಾಯಕ ಮೇಲ್ವಿಚಾರಕರಿಗೆ ತಿಳಿಸಿರ್ತಾರೆ ಅವರೂ ಕೂಡ ಬರೋಕಾಗೊಲ್ಲ ಅಂತಂದ್ರೆ ಆ ದಿನ ಗ್ರಂಥಾಲಯ ಸಂಪೂರ್ಣ ಬಂದ್' ಕಾರಣದ ನೋಟಿಸ್ ಕೂಡ ನೋಡೋಕೆ ಸಿಗೋಲ್ಲಾ .
ಯಾರದ್ರೂ ಇವರನ್ನ ಇದರ ಬಗ್ಗೆ ಕೇಳಿದ್ರೆ ತೋರಿಸ್ತಾರೆ ಕಡೆ ಬೆರಳನ್ನ! ನನ್ನ ಕೇಳೋಕೆ ಬರ್ತೀರಲ್ಲ ಹಳೆ ಗ್ರಂಥಾಲಯದ ಕಟ್ಟಡವನ್ನ ಕೆಡವಿ ಸೂಕ್ತವಲ್ಲದ ಚಿಕ್ಕದೊಂದು ರೂಂ ಕೊಟ್ಟಿದ್ದಾರೆ ಗ್ರಂಥಾಲಯ ನಡಿಸೋಕೆ ಮುನ್ಸಿಪಾಲಿಟಿಯವರು ,ಸೈಟ್ ಕೊಟ್ರೆ ನಾವೇ ದೊಡ್ಡ ಗ್ರಂಥಾಲಯ ಕಟ್ಟಿಸ್ಕೊತೀವಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರೋಕೆ ಮನಸ್ಸೂ ಬರುತ್ತೆ ಅಂತಾರೆ . ಅಷ್ಟೇ ಏಕೆ ಟೌನ್ ಜನರಿಂದ ಮುನ್ಸಿಪಾಲಿಟಿಯವರು ಕಟ್ಟಿಸ್ಕೊಳೋ ಗ್ರಂಥಾಲಯದ ಶುಲ್ಕವನ್ನ ನಮಗೆ ಗೋಗರೆದರೂ ಕೊಡುತ್ತಿಲ್ಲ ,ನಮಗೆ ಕೊಟ್ಟರೆ ಈ ವಿದ್ಯುತ್ ಶುಲ್ಕ ಕಟ್ಟಿಕೊಳ್ಳುತ್ತೇವೆ ಇನ್ನು ಹೆಚ್ಚು ಹೊತ್ತು ಅಂತಂದ್ರೆ ರಾತ್ರಿ ೮ ಗಂಟೆಯವರೆಗೂ ಬಾಗಿಲು ತೆಗೆಯುತ್ತೇವೆ ಗೊತ್ತೇನ್ರಿ ಎಂದು ಕುಂಟುನೆಪ ಹೇಳಿ ಕೇಳಿದೋರ ಬಾಯಿ ಮುಚ್ಚಿಸಿಬಿಡುತ್ತಾರೆ. ಅದೂ ಸರಿ ಅನ್ನಿ ಹೌದು ಇವರ ದೂರುತ್ತಿರುವ ಮುನ್ಸಿಪಾಲಿಟಿಯವರು ಕೇಳಿದ್ರೆ ,ಇದ್ದ ಸೈಟಗಳನ್ನ ಹಂಚಿ ಬಿಟ್ಟಿದ್ದೇವೆ ನಿಮಗೆಲ್ಲಿಂದಾ ತರೋದು ? ಇರೋದನ್ನೇ ಅಡ್ಜಸ್ಟ್ ಮಾಡ್ಕೊಳ್ಳಿ ಮುಂದೆ ಮತ್ತೆ ನಮಗೆ ಆಡಳಿತ ಸಿಕ್ಕಿದ್ರೆ ಸೈಟ್ ಹುಡುಕಿ ಕೊಡ್ತೇವೆ ಅನ್ನೋ ಅರ್ಥದಲ್ಲಿ ಮಾತಾಡ್ತಾರೆ ಕೆಲವೊಮ್ಮೆ ಬೇಜವಬ್ದಾರಿ ಆಶ್ವಾಶನೆಯನ್ನೂ ನೀಡಿದ್ದಾರೆ . ಇತ್ತೀಚಿಗೆ ಈ ಬಗ್ಗೆ ಕನ್ನಡಪರ ಸಂಘಟನೆಯೊಂದು ಧರಣಿ ಮಾಡಿದ್ದನ್ನು ಕಂಡು ಗ್ರಂಥಾಲಯಕ್ಕೆ ಸೈಟ್ ಕೊಡುವುದಂತೂ ಗ್ಯಾರಂಟಿ ಅಂತ ಎಷ್ಟೋ ಜನ ಓದುಗರು ನಿಶ್ಚಿ೦ತೆಯಿ೦ದಿದ್ದ್ರು ಆದರೆ ಸೈಟ್ ಎಲ್ಲಿ ಬಂತು ? ಕನಿಷ್ಠ ಪಕ್ಷ ಸಾರ್ವಜನಿಕರತ್ರ ಗ್ರಂಥಾಲಯದ ಹೆಸರು ಹೇಳ್ಕೊಂಡು ಮುನ್ಸಿಪಾಲಿಟಿಯವರು ಸಂಗ್ರಹಿಸೋ ಗ್ರಂಥಾಲಯದ ಸೆಸ್ಸನ್ನ ಕೊಟ್ರೆ ಸಾಕಾಗಿದೆ, ಗ್ರಂಥಾಲಯದ ಹೆಸರಿನಲ್ಲಿ ಬಾಕಿ ಇರೋ ವಿದ್ಯುತ್ ಬಿಲ್ ಕಟ್ಟಿಸಿ ಸಾಯಂಕಾಲ ೪ ಘಂಟೆಗೋ ೪:೩೦ ರ ಹೊತ್ತಿಗೋ ಬಾಗಿಲು ತೆಗೆದು ೬:೩೦ ಕ್ಕೆ ಹೆಚ್ಚು ಜನ ಕಾಣಿಸಲಿಲ್ಲ ಅಂತಂದ್ರೆ ೬ ಘಂಟೆಗೆ ಬಾಗಿಲು ಮುಚ್ಚೋದಾದರು ತಪ್ಪಿಸಬಹುದು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ ಇಲ್ಲಿಗೆ ದಿನ ಬರೋರು .
ಇವರನ್ನ (ಗ್ರಂಥಾಲಯದವರನ್ನ ಹಾಗೂ ಟೌನ್ /ಕ್ಷೇತ್ರ ಆಡಳಿತದವರನ್ನ ) ಮಂತ್ರಿಯಾದರೂ ಕಚ್ಚಾಬಾರ್ದಾ , ಮುಖ್ಯ ಮಂತ್ರಿಯಾದರೂ ಕಡಿಯಾಬಾರ್ದಾ ,ತಂದಾನಾನೋ ತಾನಾ ತಂದಾನಾನೋ ಎಂದು ತಮ್ಮಷ್ಟಕ್ಕೆ ತಾವೇ ಗಾನ ಭಾಜಾಯಿಸಿಕೊಳ್ಳುತ್ತಿದ್ದಾರೆ ಕೆಲ ಕೆ.ಆರ್ .ಪೇಟೆಯ ಓದುಗ ಮಂದಿ.
ಒಟ್ಟಿನಲ್ಲಿ ಗ್ರಂಥಲಯದ ಸೆಸ್ಸು ಯಾವ ಯಾವ ಹುಂಡಿಗೆ ಹೋಗುತ್ತಿದೆಯೋ? ಮುನ್ಸಿಪಾಲಿಟಿಯವರೇ ದಯಮಾಡಿ ತಿಳಿಸಬೇಕು .ಮುಖ್ಯಮಂತ್ರಿಯವರ ತವರು ತಾಲೋಕಿನ ಕಥೆಯೇ ಹೀಗಾದ್ರೆ ಬೇರೆ ತಾಲೋಕುಗಳಲ್ಲಿ ಇನ್ನೇಗೋ ಯಾರಿಗೆ ಗೊತ್ತು ಸ್ವಾಮೀ ..?
ಯಾರದ್ರೂ ಇವರನ್ನ ಇದರ ಬಗ್ಗೆ ಕೇಳಿದ್ರೆ ತೋರಿಸ್ತಾರೆ ಕಡೆ ಬೆರಳನ್ನ! ನನ್ನ ಕೇಳೋಕೆ ಬರ್ತೀರಲ್ಲ ಹಳೆ ಗ್ರಂಥಾಲಯದ ಕಟ್ಟಡವನ್ನ ಕೆಡವಿ ಸೂಕ್ತವಲ್ಲದ ಚಿಕ್ಕದೊಂದು ರೂಂ ಕೊಟ್ಟಿದ್ದಾರೆ ಗ್ರಂಥಾಲಯ ನಡಿಸೋಕೆ ಮುನ್ಸಿಪಾಲಿಟಿಯವರು ,ಸೈಟ್ ಕೊಟ್ರೆ ನಾವೇ ದೊಡ್ಡ ಗ್ರಂಥಾಲಯ ಕಟ್ಟಿಸ್ಕೊತೀವಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರೋಕೆ ಮನಸ್ಸೂ ಬರುತ್ತೆ ಅಂತಾರೆ . ಅಷ್ಟೇ ಏಕೆ ಟೌನ್ ಜನರಿಂದ ಮುನ್ಸಿಪಾಲಿಟಿಯವರು ಕಟ್ಟಿಸ್ಕೊಳೋ ಗ್ರಂಥಾಲಯದ ಶುಲ್ಕವನ್ನ ನಮಗೆ ಗೋಗರೆದರೂ ಕೊಡುತ್ತಿಲ್ಲ ,ನಮಗೆ ಕೊಟ್ಟರೆ ಈ ವಿದ್ಯುತ್ ಶುಲ್ಕ ಕಟ್ಟಿಕೊಳ್ಳುತ್ತೇವೆ ಇನ್ನು ಹೆಚ್ಚು ಹೊತ್ತು ಅಂತಂದ್ರೆ ರಾತ್ರಿ ೮ ಗಂಟೆಯವರೆಗೂ ಬಾಗಿಲು ತೆಗೆಯುತ್ತೇವೆ ಗೊತ್ತೇನ್ರಿ ಎಂದು ಕುಂಟುನೆಪ ಹೇಳಿ ಕೇಳಿದೋರ ಬಾಯಿ ಮುಚ್ಚಿಸಿಬಿಡುತ್ತಾರೆ. ಅದೂ ಸರಿ ಅನ್ನಿ ಹೌದು ಇವರ ದೂರುತ್ತಿರುವ ಮುನ್ಸಿಪಾಲಿಟಿಯವರು ಕೇಳಿದ್ರೆ ,ಇದ್ದ ಸೈಟಗಳನ್ನ ಹಂಚಿ ಬಿಟ್ಟಿದ್ದೇವೆ ನಿಮಗೆಲ್ಲಿಂದಾ ತರೋದು ? ಇರೋದನ್ನೇ ಅಡ್ಜಸ್ಟ್ ಮಾಡ್ಕೊಳ್ಳಿ ಮುಂದೆ ಮತ್ತೆ ನಮಗೆ ಆಡಳಿತ ಸಿಕ್ಕಿದ್ರೆ ಸೈಟ್ ಹುಡುಕಿ ಕೊಡ್ತೇವೆ ಅನ್ನೋ ಅರ್ಥದಲ್ಲಿ ಮಾತಾಡ್ತಾರೆ ಕೆಲವೊಮ್ಮೆ ಬೇಜವಬ್ದಾರಿ ಆಶ್ವಾಶನೆಯನ್ನೂ ನೀಡಿದ್ದಾರೆ . ಇತ್ತೀಚಿಗೆ ಈ ಬಗ್ಗೆ ಕನ್ನಡಪರ ಸಂಘಟನೆಯೊಂದು ಧರಣಿ ಮಾಡಿದ್ದನ್ನು ಕಂಡು ಗ್ರಂಥಾಲಯಕ್ಕೆ ಸೈಟ್ ಕೊಡುವುದಂತೂ ಗ್ಯಾರಂಟಿ ಅಂತ ಎಷ್ಟೋ ಜನ ಓದುಗರು ನಿಶ್ಚಿ೦ತೆಯಿ೦ದಿದ್ದ್ರು ಆದರೆ ಸೈಟ್ ಎಲ್ಲಿ ಬಂತು ? ಕನಿಷ್ಠ ಪಕ್ಷ ಸಾರ್ವಜನಿಕರತ್ರ ಗ್ರಂಥಾಲಯದ ಹೆಸರು ಹೇಳ್ಕೊಂಡು ಮುನ್ಸಿಪಾಲಿಟಿಯವರು ಸಂಗ್ರಹಿಸೋ ಗ್ರಂಥಾಲಯದ ಸೆಸ್ಸನ್ನ ಕೊಟ್ರೆ ಸಾಕಾಗಿದೆ, ಗ್ರಂಥಾಲಯದ ಹೆಸರಿನಲ್ಲಿ ಬಾಕಿ ಇರೋ ವಿದ್ಯುತ್ ಬಿಲ್ ಕಟ್ಟಿಸಿ ಸಾಯಂಕಾಲ ೪ ಘಂಟೆಗೋ ೪:೩೦ ರ ಹೊತ್ತಿಗೋ ಬಾಗಿಲು ತೆಗೆದು ೬:೩೦ ಕ್ಕೆ ಹೆಚ್ಚು ಜನ ಕಾಣಿಸಲಿಲ್ಲ ಅಂತಂದ್ರೆ ೬ ಘಂಟೆಗೆ ಬಾಗಿಲು ಮುಚ್ಚೋದಾದರು ತಪ್ಪಿಸಬಹುದು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ ಇಲ್ಲಿಗೆ ದಿನ ಬರೋರು .
ಇವರನ್ನ (ಗ್ರಂಥಾಲಯದವರನ್ನ ಹಾಗೂ ಟೌನ್ /ಕ್ಷೇತ್ರ ಆಡಳಿತದವರನ್ನ ) ಮಂತ್ರಿಯಾದರೂ ಕಚ್ಚಾಬಾರ್ದಾ , ಮುಖ್ಯ ಮಂತ್ರಿಯಾದರೂ ಕಡಿಯಾಬಾರ್ದಾ ,ತಂದಾನಾನೋ ತಾನಾ ತಂದಾನಾನೋ ಎಂದು ತಮ್ಮಷ್ಟಕ್ಕೆ ತಾವೇ ಗಾನ ಭಾಜಾಯಿಸಿಕೊಳ್ಳುತ್ತಿದ್ದಾರೆ ಕೆಲ ಕೆ.ಆರ್ .ಪೇಟೆಯ ಓದುಗ ಮಂದಿ.
ಒಟ್ಟಿನಲ್ಲಿ ಗ್ರಂಥಲಯದ ಸೆಸ್ಸು ಯಾವ ಯಾವ ಹುಂಡಿಗೆ ಹೋಗುತ್ತಿದೆಯೋ? ಮುನ್ಸಿಪಾಲಿಟಿಯವರೇ ದಯಮಾಡಿ ತಿಳಿಸಬೇಕು .ಮುಖ್ಯಮಂತ್ರಿಯವರ ತವರು ತಾಲೋಕಿನ ಕಥೆಯೇ ಹೀಗಾದ್ರೆ ಬೇರೆ ತಾಲೋಕುಗಳಲ್ಲಿ ಇನ್ನೇಗೋ ಯಾರಿಗೆ ಗೊತ್ತು ಸ್ವಾಮೀ ..?
Subscribe to:
Posts (Atom)
