Tuesday, January 25, 2011

ಗ್ರಂಥಾಲಯಕ್ಕೆ ಹೊಸ ದಿಗಂತ, ವಾರ್ತಾ ಭಾರತಿ ಪತ್ರಿಕೆಗಳು ಉಚಿತವಾಗಿ ಸರಬರಾಜು ಆಗುತ್ತಿವೆಯಂತೆ! ನಿಜಾನಾ?

ಸ್ಟಾರ್ ಆಫ್ ಮಂಡ್ಯ , ಪೌರವಾಣಿ, ಕೆಮ್ಮುಗಿಲು, ಮಂಡ್ಯ ಸುದ್ದಿ ,ಹಾಗೂ ಪ್ರಜಾವಾರ್ತೆ ತರಹದ ಮೂರ್ನಾಲ್ಕು ಪತ್ರಿಕೆಗಳನ್ನು ಪುಟ್ಟ ಪತ್ರಿಕೊಧ್ಯಮಿಗಳು ತಮ್ಮ ಪತ್ರಿಕೆಗಳ ಪ್ರಚಾರಕ್ಕೂ ಹಾಗೂ ಸಾರ್ವಜನಿಕರ ಉಪಯೋಗಕ್ಕೂ ಉಚಿತವಾಗಿ ಗ್ರಂಥಾಲಯಕ್ಕೆ ನೀಡುತ್ತಿರಬಹುದೇನೋ ಅದನ್ನು ನಂಬಬಹುದು ಆದರೆ ವಾರ್ತಾ ಭಾರತಿ, ಹೊಸ ದಿಗಂತ ಪತ್ರಿಕೆಗಳವರೂ ಕೆ.ಆರ್.ಪೇಟೆ ಗ್ರಂಥಾಲಯಕ್ಕೆ ಉಚಿತವಾಗಿ ಹಾಕುತ್ತಿದ್ದಾರಂತೆ! ನಂಬಲಿಕ್ಕಾಗುತ್ತಾ? ಖಂಡಿತಾ ನಿಜವಲ್ಲ ಈ ಪತ್ರಿಕೆಗಳು ಬಂದರೂ ಬರದಿದ್ದರೂ ಈ ಪತ್ರಿಕೆಗಳನ್ನು ಬಚ್ಚಿಡುತ್ತಾರೆ ಅದೇನೋ ಅದರಲ್ಲಿನ ಮರ್ಮ ತಿಳಿಯದು. ನೆನ್ನೆ ಇದ್ದ ಪತ್ರಿಕೆ ಇವತ್ತು ಇಲ್ಲವಲ್ಲ ಎಂದು ಕೇಳಿದರೆ ತಮ್ಮ ಸೋಮಾರಿತನ ಮರೆಮಾಚಲು ಮೇಲಿನಂತೆ ಹೇಳುತ್ತಾರೆ ಈ ಪತ್ರಿಕೆಗಳನ್ನು ಪ್ರತಿದಿನ ಗ್ರಂಥಾಲಯದಲ್ಲಿ ಹಾಕಿಸುತ್ತಿರುವುದು ಅಕಸ್ಮಾತ್ ಓದುಗರಿಗೆ ತಿಳಿದರೆ ಪತ್ರಿಕೆಗಳು ಬರದಿದ್ದ ದಿನದಲ್ಲಿ ಏಕೆ ಬಂದಿಲ್ಲ ಎಂದು ಜವಾಬ್ದಾರಿಯುತ ಓದುಗರು ದುಂಬಾಲು ಬೀಳುವುದು ಸಹಜ ಎಂದು ಅರಿತಿರುವ ಈ ಸಿಬ್ಬಂದಿಗಳು ಅವುಗಳನ್ನು ಬಂದರೂ ಬರದಿದ್ದರೂ ಬಚ್ಚಿಡುತ್ತಾರೆ ,ಎಂಬುದನ್ನು ಓದುಗರಾದ ನಾವೂ ಸೂಕ್ಷ್ಮವಾಗಿ ಅರಿಯಬೇಕು.
ಗ್ರಂಥಾಲಯ ಓದುಗರ ಪ್ರತಿನಿಧಿ ಹಾಗು ಲೈಬ್ರರಿ ವಾಲಂಟಿಯರ್ ಮಲ್ಲಿಕಾರ್ಜುನ ಎಂಬುವರೊಬ್ಬರು " ಪತ್ರಿಕಾ ಸರಬರಾಜುದಾರರು ಸರಿಯಾಗಿ ಪತ್ರಿಕೆಗಳನ್ನು ಹಾಕದೆ ಇರುವುದಕ್ಕೆ ಅಥವಾ ಹಾಕಿದ್ದರೂ ನಿಮ್ಮಿಂದ ಸಾರ್ವಜನಿಕರಿಗೆ ಒದಗಿಸಲಾಗದಿರುವುದಕ್ಕೆ ನಿಮ್ಮಲ್ಲಿರುವ ಈ ಕರ್ತವ್ಯ ಅಸಮರ್ಥತೆ , ಸಿಬ್ಬಂದಿಗಳಲ್ಲಿನ ಅಶಿಸ್ತು ಮತ್ತು ಅವಶ್ಯಕ ಸಾಮಾನ್ಯ ಜ್ಞಾನವಿಲ್ಲದಿರುವುದೇ ಕಾರಣ ನಿಮ್ಮಂಥವರ ಇಂತ ಅಜ್ಞಾನದಿಂದ, ಅಸಮರ್ಥತೆಯಿಂದ ಕೆಲ ಓದುಗರಿಗೆ ಮಾಹಿತಿಗಳ ನಷ್ಟವಾಗುತ್ತಿದೆ, ಅಜ್ಞಾನಿಗಳಾಗಲು ಕಾರಣವಾಗುತ್ತಿದೆ , ಉದ್ಯೋಗಿಗಳಾಗಲು ವಿಳಂಬವಾಗುತ್ತಿದೆ. ಇನ್ನೂ ಕೆಲವರಿಗೆ ಹೆಚ್ಚು ಆರ್ಥಿಕ ನಷ್ಟ ಉಂಟಾಗುತ್ತಿದೆ ವ್ಯವಹಾರಧಾರರಿಗೆ ಮಾತ್ರ ಉಪಯೋಗವಾಗುತ್ತಿದೆ, ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಹೊರೆ ಬೀಳುತ್ತಿದೆ. ಇವುಗಲೆಲ್ಲವುಗಳ ಅರಿವಿದ್ದರೂ ಬೇಕೆಂತಲೇ ಕೆಲ ಸಿಬ್ಬಂದಿಗಳು ಮೌನದಿಂದಿದ್ದೀರಿ ಎಂದರೆ ಜವಾಬ್ದಾರಿಯಿಲ್ಲದವರಂತೆ ಸುಮ್ಮನೆ ಕಾಲಹರಣಮಾಡಿ ಪುಗುಸಟ್ಟೆ ಸಂಬಳ ಪಡೆದು ಹೋಗುವುದಕ್ಕೆ ಎಂದೇ ಅರ್ಥ. ಇಂತಹ ನಿಮ್ಮ ನಿಲುವಿಗೆ ಓದುಗರಾದ ನಾವು ಅದರಲ್ಲೂ ಸ್ವಯಂ ಸಾರ್ವಜನಿಕ ಓದುಗರ ಪ್ರತಿನಿಧಿಯಾದವರು ಸುಮ್ಮನಿರಲಿಕ್ಕಾಗುವುದಿಲ್ಲವೆಂದರಿತು ನಿಮಗೆ ನಮ್ಮ ಕೈಲಾದ ಉತ್ತಮ ಸಾರ್ವಜನಿಕ ಸ್ನೇಹಿ ಗ್ರಂಥಾಲಯ ನಿರ್ವಹಣೆ ಬಗ್ಗೆ ತರಬೇತಿಯನ್ನು ಉಚಿತವಾಗಿ ನೀಡುತ್ತಾ ಬರುತ್ತಿದ್ದರೂ ಎಲ್ಲಾ ಸಿಬ್ಬಂದಿಗಳು ಪಾರದರ್ಶಕತೆಯನ್ನು ತೋರುತ್ತಿಲ್ಲವಾದ್ದರಿಂದ, ಹಾಗೂ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸ್ವಯಂ ಜನಪ್ರತಿನಿಧಿಯಾಗಿ/ಸೋಧರನ ಸ್ಥಾನದಲ್ಲಿ ನಿಂತು ಎಷ್ಟೇ ತಿಳುವಳಿಕೆಗಳನ್ನು ಮತ್ತು ಅವಕಾಶಗಳನ್ನೂ ನೀಡುತ್ತಾ ಬಂದಿದ್ದರೂ ಸಿಬ್ಬಂದಿಗಳಾದ ನೀವು ಸರಿಯಾಗಿ ಪಾಲನೆ ಮಾಡದೆ ತಮ್ಮಗಳ ಕೆಲ ಅಕ್ಕಪಕ್ಕದ ಸ್ನೇಹಿತರ ಪ್ರೇರಣೆಯಿಂದ ಜವಾಬ್ದಾರಿಯುತ ಸಾರ್ವಜನಿಕ ಸೇವೆಗೆ ವಿರುದ್ದವಾಗಿ ಕರ್ತವ್ಯ ಮಾಡುತ್ತೇವೆ ಎಂದು ವಾದಿಸುತ್ತಿರುವುದರಿಂದ ನಿಮ್ಮಂಥ ನಿಷ್ಪ್ರಯೋಜಕ ಸಿಬ್ಬಂದಿಗಳ ಸೇವೆ ನಮಗೆ ಬೇಡವೆಂದು ಅದಕ್ಕೆ ನಿಮ್ಮ ಮೇಲೆ ಕರ್ತವ್ಯ ಸ೦ಭ೦ಧಿತ ದೂರು ನೀಡಲು ಯೋಚಿಸಿದ್ದೆವು, ನೀವುಗಳೆಲ್ಲರೂ ಇದೆ ರೀತಿ ಸೋಮಾರಿತನ ಪ್ರಧರ್ಶಿಸಿದರೆ ಅದನ್ನು ಕಾರ್ಯರೂಪಕ್ಕೆ ತರಲು ಚಿಂತಿಸಬೇಕಾಗುತ್ತದೆ" ಎಂದು ಎಚ್ಚರಿಕೆಯನ್ನು ನೀಡಿದರು. ಅಲ್ಲಿ ನೆರೆದಿದ್ದ ಓದುಗರೆಲ್ಲರೂ ಸೇರಿ ಕಟ್ಟಕಡೆಯ ಅವಕಾಶವನ್ನು ನೀಡಿದೆವು.

No comments:

Post a Comment