Monday, January 24, 2011

ಗ್ರಂಥಾಲಯದ ಪ್ರಪ್ರಥಮ ಸೂಚನಾ ಪತ್ರ ಹಾಗೂ ವಿಶೇಷ ಸಭೆ

ದಿನ ಅಂದರೆ ದಿನಾಂಕ ೨೪ ಜನವರಿ ೨೦೧೧ ರಂದು ಕೆ.ಆರ್. ಪೇಟೆ ತಾಲೋಕಿನ ಗ್ರಂಥಾಲಯದ ಸಿಬ್ಬಂದಿಗಳು ತಮ್ಮ ರಾಜ್ಯ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಮುಖ್ಯಸ್ಥರೊಂದಿಗೆ ಸಭೆ ಏರ್ಪಡಿಸಿಕೊಂಡಿದ್ದರೂ ಸಾರ್ವಜನಿಕರಿಗೆ ತಿಳಿಸುವ ಉದ್ದೇಶವಿದ್ದಿದ್ದರೆ ಹಿಂದಿನ ದಿನಾಂಕ ೨೨ ಜನವರಿ ೨೦೧೧ ರ೦ದು ಮುಂಚಿತವಾಗಿ ಸೂಚನೆ ಪತ್ರ ಹಾಕಬೇಕಿತ್ತು ಆದರೆ ಈ ವಿಷಯ ಜನಗಳಿಗೆ ಗೊತ್ತಾಗಿ ಎಲ್ಲಿ ತಮ್ಮ ಕುತಂತ್ರದ ಬಂಡವಾಳ ಬಯಲು ಮಾಡಿಬಿಟ್ಟಾರೆಂದು ಮೊದಲೇ ಯೋಚಿಸಿ ಉಪಾಯದಿಂದ ಸಭೆಯ ದಿನದ ಬೆಳಿಗ್ಗೆ ೧೧:೨೫ ಘಂಟೆಗೆ ಒಂದು ಚೀಟಿ ತಂದು ಬಾಗಿಲಿನ ಮೇಲೆ ಅಂಟಿಸಿದರು ಮತ್ತು ಬೇರೆ ದಿನಗಳಂದು ಗ್ರಂಥಾಲಯದ ಸಂಜೆಯ ಸಮಯದಲ್ಲಿ ಕನಸಿಗೂ ಬರದ, ಆಗೊಮ್ಮೆ ಈಗೊಮ್ಮೆ ಬೆಳಗಿನ ವೇಳೆಯಲ್ಲಿ ಮಾತ್ರ ಕಾಣಸಿಗುವ, ತಮ್ಮ ಗ್ರಂಥಪಾಲಕರ ಒಂದಿಬ್ಬರು ಸ್ಥಳೀಯ ಸ್ನೇಹಿತ ಓದುಗರುಗಳು ತಮಗೇನಾದರೂ ದಿನ ಪತ್ರಿಕೆಯ ಬೇಕಾದ ಭಾಗವನ್ನು ಕತ್ತರಿಸಿ ಸಿಕ್ಕಿ ಬೀಳುವ ಸಮಯ ಬಂದರೆ ತಮ್ಮನ್ನು ಮನ್ನಿಸಲೆಂದು ಹಾಗೂ ದಿನ ಪತ್ರಿಕೆಗಳನ್ನು ತಮ್ಮ ವಯಕ್ತಿಕ ಉಪಯೋಗಕ್ಕೊಸ್ಕರ ಬಳಸಿಕ್ಕೊಳ್ಳಲು ಕೆಲವೊಮ್ಮೆ ಕರುಣೆ ತೋರಲೆಂದು ಈತನ ಜೊತೆ ಮತ್ತು ಗ್ರಂಥಪಾಕರ ಜೊತೆ ತುಂಬಾ ಸಲಿಗೆಯಿಂದ ಸ್ವಾರ್ಥ ಪ್ರೀತಿ ತೋರುವುದರಿಂದ ಅಂಥವರ ಜೊತೆ ಕೆಲಸದ ವೇಳೆಯಲ್ಲೇ ಹರಟೆ ಹೊಡೆಯುವ ಸಿಬ್ಬಂದಿಯವರುಗಳಲ್ಲಿ ಒಬ್ಬರಾದ ಇಲ್ಲಿನ ಗ್ರೂಪ್ 'ಡಿ' ನೌಕರರು ಮಿಸ್ ಹಾಗದೆ ಹಾಜರಿದ್ದುದಲ್ಲದೆ ಅಂದು ಓದುಗರನ್ನು ಏರಿದ ದ್ವನಿಯಲ್ಲಿ ಬೇಗ ಬೇಗ ಹೊರ ಹೋಗುವಂತೆ ಆಧೇಶಿಸುತ್ತಿದ್ದರು.ಈ ದಿನದ ಆ ಸೂಚನಾ ಚೀಟಿಯೇ ಈ ಗ್ರಂಥಾಲಯದಲ್ಲಿ ಸಭೆ ನಡೆಸುತ್ತಿರುವುದಕ್ಕೆ ಸಂಭಂಧಪಟ್ಟಂತೆ ಪ್ರಪ್ರಥಮ ಸೂಚನಾ ಚೀಟಿ ಇದುವೆ ಇವರ ಮೊದಲ ನಿಷ್ಠೆ ಗ್ರಂಥಾಲಯದ ಸಂಬಳಕ್ಕೆ. ಈ ಅರ್ಧ೦ಭರ್ದ ನಿಷ್ಠೆಯನ್ನು ತಮ್ಮ ಸಹೋದ್ಯೋಗಿಗಳಿಗೆ ಮತ್ತು ಮೇಲಧಿಕಾರಿಗಳಿಗೆ ತೋರಿಸಲು ಇವರ ಮೊದಲ ಪ್ರಯತ್ನವೆಂದೆ ಹೇಳಬಹುದು. ಆದರೂ ಇವರ ಕುತಂತ್ರ ಬುದ್ಧಿ ಯಾಗಿಗೆ ತಾನೇ ಗೊತ್ತಾಗೊದಿಲ್ಲಾ? ಪ್ರತಿದಿನ ಇಲ್ಲಿನ ಗ್ರಂಥಾಲಯದ ಸಿಬ್ಬಂದಿಗಳು ಸಾರ್ವಜನಿಕ ಓದುಗರಿಗೆ ಸರಿಯಾದ ಸೇವೆಯನ್ನೋದಗಿಸಲಾಗದೆ ಶಾಪ ಹಾಕಿಸಿಕೊಳ್ಳುವುದು ಹೊಸದೇನಲ್ಲ ಮತ್ತು ಇವರು ಗ್ರಂಥಾಲಯದ ಸೇಸ್ಸು ಕೊಡಿಸಿ,ನಮ್ಮ ಸ೦ಭಳ ಸರಿಯಾದ ವೇಳೆಗೆ ಬರುವಂತೆ ಮಾಡಲು ನಿಮ್ಮಿಂದ ಸಾದ್ಯವಾದರೆ ಸರಿಯಾಗಿ ಸೇವೆ ಕೊಡುತ್ತೇವೆ ಎನ್ನುವಂತ ಪ್ರತಿರೋಧ ನಿಂತಿಲ್ಲ ಆದರೂ ಹಿಂದಿನ ಎಲ್ಲಾ ಬಂದಿರದ ಪ್ರಮುಖ ಪತ್ರಿಕೆಗಳಿಗೂ ಪ್ರೆಸೆಂಟ್ ನೀಡಿ ಬಿಲ್ಲ್ನಲ್ಲಿ ಮಾತ್ರ ಸರಿಯಾದ ಮೊತ್ತ ಬರೆಯಿಸಿ/ಬರೆದು ಹಣ ಪಡೆದು/ ಹಣ ಸಿಗುವಂತೆ ನೋಡಿಕೊಂಡು ಪತ್ರಿಕಾ ಸರಬರಾಜುದಾರರ ಮುದ್ದಿನ ಕಣ್ಮಣಿಯಾಗಿದ್ದಾರೆ. ಆ ಸಭೆಯ ಸೂಚನಾ ಚೀಟಿಯನ್ನು ಕನಿಷ್ಠ ಪಕ್ಷ ಸಭೆಯ ದಿನದ ಬೆಳಗ್ಗೆ ಭಾಗಿಲು ತೆರೆದಾಗಲಾದರೂ ಹಾಕಬಹುದಿತ್ತು.ಹಾಗೆ ಮಾಡಿದ್ದರೆ ಕಾಳಜಿಯಿರುವ ಕೆಲವರಾದರೂ ಇಲ್ಲಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದರೆನೋ! ಹಾಗು ಇವರಿಗೆ ಮುನ್ಸಿಪಾಲಿಟಿಯಿಂದ ದೊರೆಯದಿರುವ ಸೇಸ್ಸನ್ನು ನ್ಯಾಯಯುತವಾಗಿ ಕೇಳಲು, ಇನ್ನಿತರೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಸಾರ್ವಜನಿಕರ ಸಹಕಾರ ಸಿಗಬಹುದಿತ್ತಲ್ಲವೇ ? ಇವರ ಎಲ್ಲಾ ವಿಷಯ ಗೊತ್ತಿರೋ ಕೆಲ ತರಭೆತುಧಾರ ಓದುಗ ಮಂದಿಗೆ ಇಲ್ಲಿನ ಸಭೆಯ ವಿಚಾರ ಮೊದಲೇ ತಿಳಿದರೆ ನನ್ನ ಬಗ್ಗೆ ಕಂಪ್ಲೈಂಟ್ ಮಾಡಿ ಸಬೆಗೆ ಹಾಜರಾಗುವ ಸಹೋಧ್ಯೋಗಿ ಸಭಿಕರ ಎದುರು ನನ್ನ (ಇಲ್ಲದ)ಮಾನ ಕಳೆದು ಹೋದೀತು ಎಂದು ಬ್ರಮಿಸಿ ಈ ರೆಡಿಮೇಡ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಒಟ್ಟಿನಲ್ಲಿ ಇವರಲ್ಲಿ ೯೦% ಎಲ್ಲರ ಉದ್ದೇಶವಿಷ್ಟೇ :
ನಮಗೆ ಸಂಬಳ ಸರಿಯಾಗಿ ಸಿಗಬೇಕು, ಕಾಲಕಾಲಕ್ಕೆ ಏರಿಕೆಯಾಗುವಂತೆ ನೋಡಿಕೊಳ್ಳಬೇಕು, ಸಭೆ ಸಮಾರಂಭಗಳಲ್ಲಿ ನಮ್ಮ ಬಗ್ಗೆ ಸಿಬ್ಬಂದಿ-ಕರ್ತವ್ಯಕ್ಕೆ ಸ೦ಭ೦ಧಿತ ಯಾವುದೇ ದೂರುಗಳನ್ನೂ ತಡೆಗಟ್ಟಬೇಕು, ಇದರ ಬದಲೂ ಮೇಲಧಿಕಾರಿಗಳ ಅನುಕಂಪ ಗಿಟ್ಟಿಸಬೇಕು. ತಮ್ಮ ಸ್ವಾರ್ಥ ಸೇವೆಗೆ ಖಾಲಿ ಹೊಗಳಿಕೆ ಮಾತ್ರ ಪಡೆಯಬೇಕು, ಓದುಗರನ್ನು ನಮ್ಮ ವಯಕ್ತಿಕ ಆಡಳಿತದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು, ಪ್ರತಿರೋಧಿಸುವವರಿಗೆ ಕುತಂತ್ರದಿಂದ ಸುಳ್ಳು ಹೇಳಬೇಕು/ತಮ್ಮ ಕಡೆಯವರಿಂದ ಬೇಕಂತಲೇ ಜಗಳ ಮಾಡಿಸಿ ಬೆದರಿಸಬೇಕು ಅಥವಾ ಗ್ರಂಥಾಲಯ ಇಲಾಕೆಗೆ ಅಂಟಿಕೊಂಡಿರುವ ಬೇರಾವುದೇ ಇಲಾಕೆಗಳ ದೌರ್ಭಲ್ಯವನ್ನು ಪ್ರಸ್ತಾಪಿಸಿ ತಮ್ಮ ಮೇಲಿನ ಕಳ೦ಕಗಳನ್ನು ಮರೆಮಾಚಿ ಬೇರೆ ಕಡೆಗೆ ಸಾರ್ವಜನಿಕರ ಆಕ್ರೋಶವನ್ನು ಕೇಂದ್ರಿಕರಿಸಬೇಕು, ತಮ್ಮನ್ನು ತಮ್ಮ ತಕ್ಕದಲ್ಲುದಾದ ಕರ್ತವ್ಯವನ್ನು ಯಾರೂ ಪ್ರಶ್ನಿಸದಂತೆ ಎಚ್ಚರವಹಿಸಬೇಕು, ಕರ್ತವ್ಯ ಸಮಯ ಕಡಿಮೆಯಾಗಬೇಕು, ನಾವುಗಳು ನಮ್ಮ ದೈನಂದಿನ ಬೇರೆ ವ್ಯವಹಾರಗಳಲ್ಲಿ ತೊಡಗಿ ಅಲ್ಲೂ ಆಧಾಯ ಗಳಿಸಬೇಕು, ಸಂಜೆ ವೇಳೆ ವಿದ್ಯುತ್ ಸಮಸ್ಯೆಯಿರುವಂತೆ ಎಚ್ಚರವಹಿಸಬೇಕು, ಬೇಗ ಮನೆಗೆ ಹೋಗಬೇಕು , ವಿಳಂಬವಾಗಿ ಕರ್ತವ್ಯಕ್ಕೆ ಬರಬೇಕು ಇದು ಸದ್ಯದ ಎಲ್ಲಾ ಶೇ.೯೦ ಭಾಗ ಎಲ್ಲಾ ಇಲಾಕೆಯ ಸಿಬ್ಬಂದಿಗಳು ಅದರಲ್ಲೂ ಬೇಗನೆ ಓದುಗರ ಕಣ್ಣಿಗೆ ಸಿಗುವ ಗ್ರಂಥಾಲಯ ಸಿಬ್ಬಂದಿಗಳು ತಮ್ಮ ನಿತ್ಯ ಕರ್ತವ್ಯಗಳಲ್ಲಿ ಪಾಲಿಸುತ್ತಿರುವ ಆದರ್ಶಗಳು! ಎಂದರೆ ನಂಬಲೇ ಬೇಕು. ಇದು ಬೇಜವಬ್ದಾರಿ, ಅಪವಿತ್ರ, ಅಜ್ಞಾನಿ, ಅವಿವೇಕತನ, ಸ್ವಾರ್ಥದಿಂದ ಕೂಡಿದ ಕ್ಷೇತ್ರಾಡಳಿತ/ಸ್ಥಳೀಯ ಸರ್ಕಾರಿ ಆಡಳಿತ ವ್ಯವಸ್ಥೆಯ ಇಣುಕು ನೋಟ. ಇಲ್ಲಿನ ಸಿಬ್ಬಂದಿಗಳ ನೇಮಕಾತಿಯನ್ನು ರದ್ದುಪಡಿಸಿ ಸೇವಾ ಮನೋಭಾವವುಳ್ಳ ಸ್ಥಳೀಯ ನಿರುದ್ಯೋಗಿಗಳನ್ನು ಮರುನೇಮಕ ಮಾಡಬೇಕೆನ್ನುವುದು, ಮಾಡಬೇಕಾಗಿರುವುದು ಸದ್ಯಕ್ಕಿರುವ ಪಾರ್ಯಾಯ ಪರಿಹಾರವೆಂದು ಸ್ಥಳೀಯ ಜವಾಬ್ದಾರಿಯುತ ಗ್ರಂಥಾಲಯ ಓದುಗರ ಅಭಿಪ್ರಾಯ.

No comments:

Post a Comment